ಮುಖಪುಟ /ನಮ್ಮ ದೇವಾಲಯಗಳು  

ಶರವು ಮಹಾಗಣಪತಿ, ಶರಭೇಶ್ವರ ದೇವಾಲಯ

ಬಂದರು ನಗರಿಯ ಉದ್ಭವ ಗಣೇಶ


Sharavu Mahaganapathi Temple, Dakshina Kannada, Mangalore, ಮಂಗಳೂರು, ದಕ್ಷಿಣ ಕನ್ನಡ, ಶರವು ಮಹಾ ಗಣಪತಿ ದೇವಸ್ಥಾನ, temples of Karnataka, ourt temples.in, ನಮ್ಮ ದೇವಾಲಯಗಳು, Kannadaratna.com, T.M.Satish, ಟಿ.ಎಂ.ಸತೀಶ್
ಕರುನಾಡ ಕರಾವಳಿಯ ಪ್ರಮುಖ ನಗರ ಮಂಗಳೂರು. ಮಂಗಳಕರೆಯಾದ ಮಹತೋಭಾರ ಶ್ರೀ ಮಂಗಳಾದೇವಿ ನೆಲೆಸಿಹ ಈ ನಗರದಲ್ಲಿ ಸುಮಾರು 800 ವರ್ಷಗಳಷ್ಟು ಪುರಾತನವಾದ ಪುರಾಣ ಪ್ರಸಿದ್ಧ ಶ್ರೀ ಶರಭೇಶ್ವರ ಮತ್ತು ಉದ್ಭವ ಮಹಾಗಣಪತಿಯ ದೇವಾಲಯವಿದೆ. ಅದುವೇ ಶರವು ಮಹಾಗಣಪತಿ ದೇಗುಲ. ಮಂಗಳೂರು ನಗರದ ಹಂಪನಕಟ್ಟೆಯಿಂದ ಕಾಲ್ನಡಿಗೆಯ ದೂರದಲ್ಲಿರುವ ಈ ದೇವಾಲಯ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.
ಸುಂದರವಾದ ದೇವಾಲಯದಲ್ಲಿ ಶಿವ, ಮಹಾಗಣಪತಿ ಮತ್ತು ಸಿದ್ಧಿಲಕ್ಷ್ಮೀ ದೇವರುಗಳು ನೆಲೆಸಿದ್ದಾರೆ. ದೇಗುಲ ಪ್ರಾಕಾರದಲ್ಲಿ ನಾಗಬ್ರಹ್ಮ, ರಕ್ತೇಶ್ವರಿ ದೇಗುಲಗಳಿವೆ. ಪವಿತ್ರ ಕಲ್ಯಾಣಿ, ವಸಂತ ಮಂಟಪ, ಯಜ್ಞಕುಂಡ, ಪ್ರವೇಶದ್ವಾರ, ಗೋಪುರ ಪ್ರಾಕಾರಗಳು ಈ ದೇವಾಲಯಕ್ಕಿವೆ. ಇಲ್ಲಿರುವ ಮಹಾಗಣಪತಿಗೆ ಚಿನ್ನದ ಕವಚ ಧಾರಣೆ ಮಾಡಲಾಗುತ್ತದೆ.
ಐತಿಹ್ಯ ಈ ಕ್ಷೇತ್ರಕ್ಕೆ ಶರವು ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಸ್ಥಳ ಪುರಾಣವಿದೆ. 800 ವರ್ಷಗಳ ಹಿಂದೆ ಈ ಭಾಗವನ್ನು ಆಳುತ್ತಿದ್ದ ದೊರೆ ವೀರಬಾಹು ಜನ, ಜಾನುವಾರು ಹಾಗೂ ಬೆಳೆ ರಕ್ಷಣೆಗಾಗಿ ಒಮ್ಮೆ ಬೇಟೆಗೆ ಬಂದಾಗ, ಹಸುವಿನ ಬಳಿ ಹುಲಿ ನಿಂತಿರುವುದನ್ನು ಕಂಡು ಹುಲಿಯನ್ನು Sharavu Mahaganapathi Temple, Dakshina Kannada, Mangalore, ಮಂಗಳೂರು, ದಕ್ಷಿಣ ಕನ್ನಡ, ಶರವು ಮಹಾ ಗಣಪತಿ ದೇವಸ್ಥಾನ, temples of Karnataka, ourt temples.in, ನಮ್ಮ ದೇವಾಲಯಗಳು, Kannadaratna.com, T.M.Satish, ಕೊಲ್ಲಲು ಬಾಣ ಬಿಡುತ್ತಾನೆ. ಆದರೆ ಅದು ತಪ್ಪಿ ಹಸುವಿಗೆ ತಾಗಿ ಹಸು ಪ್ರಾಣ ಬಿಡುತ್ತದೆ. ಮೊದಲೇ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ಆ ವೀರಬಾಹು, ಈಗ ತನ್ನಿಂದ ಗೋಹತ್ಯೆಯೂ ಆಯಿತಲ್ಲ ಎಂದು ಕುಗ್ಗಿ ಹೋಗುತ್ತಾನೆ. ಆಗ ಭರದ್ವಾಜ ಮಹಾಮುನಿಗಳು, ರಾಜ ನೀನು ಉದ್ದೇಶಪೂರ್ವಕವಾಗಿ ಗೋಹತ್ಯೆ ಮಾಡಿಲ್ಲ, ನಿನಗರಿವಿಲ್ಲದೆ ಪ್ರಮಾದವಶಾತ್ ಈ ದುರ್ಘಟನೆ ನಡೆದಿದೆ. ಹೀಗಾಗಿ ನೀನು ನಿನ್ನ ಶರ ಬಿದ್ದ ಜಾಗದಲ್ಲಿ ಶಿವಾಲಯ ಕಟ್ಟಿ ಪೂಜಿಸು, ನಿನ್ನ ಪಾಪ ಪರಿಹಾರವಾಗುತ್ತದೆ ಎಂದರು. ನಾಲ್ಕು ಮೈಲಿ ಚದರಳತೆಯ ವನ ಪ್ರದೇಶದಲ್ಲಿ ರಾಜನ ಶರ ಅಥವಾ ಬಾಣ ಬಿದ್ದ ಕಾರಣ ಈ ಜಾಗಕ್ಕೆ ಶರಪತ್ತು ಅಥವಾ ಶರವು ಎಂಬ ಹೆಸರು ಬಂತು. ಋಷಿಗಳ ಆದೇಶದಂತೆ ರಾಜ, ಅದೇ ಸ್ಥಳದಲ್ಲಿ ಒಂದು ಕೆರೆಯನ್ನು ಹಾಗೂ ಶಿವಾಲಯ ನಿರ್ಮಿಸಿದ. ಸ್ವತಃ ಭರದ್ವಾಜ ಮಹಾಮುನಿಗಳೇ ಇಲ್ಲಿ ಶಿವಲಿಂಗ ಪ್ರತಿಷ್ಠಾಪನೆ ನೆರವೇರಿಸಿದರು. ತಾನು ಬೇಟೆಗೆ ಬಂದು ಶರ ಸಂಧಾನದಿಂದ ಹಸುವನ್ನು ಕೊಂದ ಕಾರಣ ಹಾಗೂ ಕಿರಾತ ಅಥವಾ ಬೇಡನ ವೇಷದಲ್ಲಿ ಬಂದು ಅರ್ಜುನನೊಂದಿಗೆ ಹೋರಾಡಿ ಅರ್ಜುನನಿಗೆ ಪಾಶುಪತಾಸ್ಟ್ರ ನೀಡಿದ ಶರಭೇಶ್ವರನ ನೆನೆದು ಇಲ್ಲಿ ದೇಗುಲ ಕಟ್ಟಿದ ಕಾರಣ ಈ ಶಿವನಿಗೆ ಶರಭೇಶ್ವರ ಎಂದು ಕರೆದ. ಇಲ್ಲಿ ಭರದ್ವಾಜ ಮಹಾಮುನಿಗಳು ತಮ್ಮ ಶಕ್ತಿಯಿಂದ ನೇತ್ರಾವತಿ ನದಿಯ ತೀರ್ಥ ಬರುವಂತೆ ಮಾಡಿದರು. ಇದು ಶರತೀರ್ಥವಾಯಿತು. ಕೆರೆ ಸುತ್ತಲ ಭಾಗ ಶರಭ ತಟಾಕವಾಯಿತು. 
Sharavu Mahaganapathi Temple, Dakshina Kannada, Mangalore, ಮಂಗಳೂರು, ದಕ್ಷಿಣ ಕನ್ನಡ, ಶರವು ಮಹಾ ಗಣಪತಿ ದೇವಸ್ಥಾನ, temples of Karnataka, ourt temples.in, ನಮ್ಮ ದೇವಾಲಯಗಳು, Kannadaratna.com, T.M.Satish, ಕಾಲಾನಂತರದಲ್ಲಿ ಈ ದೇವಾಲಯದ ದಕ್ಷಿಣದ ಗೋಡೆಯಲ್ಲಿ ದಶಭುಜ ಮಹಾಗಣಪತಿ ಉದ್ಭವಿಸಿದ. ಗಣಪ ಇಲ್ಲೇಕೆ ಉದ್ಭವಿಸಿದ ಎಂಬ ಬಗ್ಗೆಯೂ ಸ್ಥಳ ಪುರಾಣದಲ್ಲಿ ಉಲ್ಲೇಖ ಇದೆ. ತಾರಕಾಸುರನನ್ನು ಕೊಂದು ಕುಮಾರಧಾರಾ ನದಿಯಲ್ಲಿ ತನ್ನ ಆಯುಧ ತೊಳೆದು, ಪ್ರಕೃತಿ ರಮಣೀಯವಾದ ಕುಮಾರ ಪರ್ವತದಲ್ಲಿ ನೆಲೆಸಿಹ ಸುಬ್ರಹ್ಮಣ್ಯನಿಗೆ ಅವರ ಸೋದರ ಶ್ರೀ ಮಹಾಗಣಪತಿಯು ತಾನೂ ಕೂಡ ಈ ಪ್ರದೇಶದಲ್ಲಿ ಅಂದರೆ ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಸಮುದ್ರ ಸೇರುವ ಸ್ಥಳದಲ್ಲಿ ನೆಲೆಸಿ ಜನರ ಅಭಿಷ್ಟ ಪೂರೈಸುವುದಾಗಿ ಮಾತುಕೊಟ್ಟಿದ್ದ. ತಾನು ಉದ್ಭವಿಸಲು ಸಮಯಕ್ಕೆ ಕಾಯುತ್ತಿರಲಾಗಿ, ಭರದ್ವಾಜ ಮಹಾಮುನಿಗಳು ಸ್ಥಾಪಿಸಿ ಪೂಜಿಸಿದ ತನ್ನ ತಂದೆ ಶರಭೇಶ್ವರ ದೇವಾಲಯದ ದಕ್ಷಿಣ ಭಾಗದ ಮನೋಹರ ಪ್ರಕೃತಿ ಸೌಂದರ್ಯಕ್ಕೆ ಮನಸೋತು. ಅಲ್ಲಿಯೇ ನೆಲೆಸಲು ತೀರ್ಮಾನಿಸಿ, ಸಿದ್ಧಿಲಕ್ಷ್ಮೀಯೊಂದಿಗೆ ಗೋಡೆಯಲ್ಲಿ ಉದ್ಭವಿಸಿದನಂತೆ. 
Sharavu Mahaganapathi Temple, Dakshina Kannada, Mangalore, ಮಂಗಳೂರು, ದಕ್ಷಿಣ ಕನ್ನಡ, ಶರವು ಮಹಾ ಗಣಪತಿ ದೇವಸ್ಥಾನ, temples of Karnataka, ourt temples.in, ನಮ್ಮ ದೇವಾಲಯಗಳು, Kannadaratna.com, T.M.Satish, ವೀರಬಾಹುವಿನ ಬಳಿಕ ಈ ಭಾಗದ ದೊರೆಯಾದ ವೀರನರಸಿಂಹ ಬಂಗರಾಜನಿಗೆ ಗಣಪ ಕನಸಲ್ಲಿ ಕಾಣಿಸಿಕೊಂಡು ತಾನು ಶರಭೇಶ್ವರ ದೇವಾಲಯದ ದಕ್ಷಿಣ ಗೋಡೆಯಲ್ಲಿ ಸಿದ್ಧಿಲಕ್ಷ್ಮೀಯೊಂದಿಗೆ ಉದ್ಭವಿಸಿರುವ ವಿಷಯ ತಿಳಿಸಿ, ಗೋಪುರ ಹಾಗೂ ಮಂಟಪ ನಿರ್ಮಿಸುವಂತೆ ಸೂಚಿಸಿದನು. ಬಂಗರಾಜ ಅಲ್ಲಿ ಸಿದ್ಧಿಲಕ್ಷ್ಮೀ ಗಣಪನಿಗೆ ಮಂಟಪ, ಗೋಪುರ ನಿರ್ಮಿಸಿ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದನಂತೆ. ಅಂದಿನಿಂದ ಇಂದಿನವರೆಗೂ ಇಲ್ಲಿ ನಿತ್ಯಪೂಜೆ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬಂದಿದೆ. ಮಂಗಳೂರಿನ ಮೇಲೆ ದಂಡೆತ್ತಿ ಬಂದು ದೇವಾಲಯದ ಮುಂದೆ ಬೀಡು ಬಿಟ್ಟಿದ್ದ ಟಿಪ್ಪೂ ಸುಲ್ತಾನ್ ಸಹ ಆನೆ ತನ್ನನ್ನು ತುಳಿದಂತೆ ಕೆಟ್ಟ ಕನಸು ಬಿದ್ದ ಹಿನ್ನೆಲೆಯಲ್ಲಿ ಬೆಚ್ಚಿಬಿದ್ದು, ಈ ಗಣಪತಿಯ ಮಹಿಮೆ ಅರಿತು. ಪೂಜೆಗೆ ವ್ಯವಸ್ಥೆ ಮಾಡಿ ಹಿಂತಿರುಗಿದನೆಂದು ಹೇಳಲಾಗುತ್ತದೆ.
ಒಟ್ಟಾರೆಯಾಗಿ ಸಿದ್ಧಿಲಕ್ಷ್ಮೀಯೊಂದಿಗೆ ಶರಭೇಶ್ವರ ದೇವಾಲಯದಲ್ಲಿ ನೆಲೆಸಿರುವ ಮಹಾಗಣಪತಿ ಮಂಗಳೂರು ನಗರವನ್ನು ತಾಯಿ ಮಂಗಳಾದೇವಿಯೊಂದಿಗೆ ಸಲಹುತ್ತಿದ್ದಾನೆ. 

ಮುಖಪುಟ /ನಮ್ಮ ದೇವಾಲಯಗಳು