ಮುಖಪುಟ /ನಮ್ಮದೇವಾಲಯಗಳು 

ತ್ರಿವಿಧ ದಾಸೋಹ ಕ್ಷೇತ್ರ ಸಿದ್ಧಗಂಗೆ

ಅನ್ನ, ಅಕ್ಷರ, ಜ್ಞಾನ ದಾಸೋಹದ ಪವಿತ್ರ ತಾಣ 

ಸಿದ್ಧಗಂಗೆ ಬೆಟ್ಟ, ತುಮಕೂರು, Siddagan, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ge, God, Dr. Shvakumara swamiji.*ಟಿ.ಎಂ. ಸತೀಶ್

ಕರ್ನಾಟಕದ ಹೆಮ್ಮೆಯ ತಾಣಗಳಲ್ಲಿ ಒಂದಾದ ತುಮಕೂರು ಬಳಿಯ ಶ್ರೀ.ಸಿದ್ಧಗಂಗೆ ಪರಮ ಪವಿತ್ರವಾದ ಕ್ಷೇತ್ರ. ತುಮಕೂರು ಜಿಲ್ಲಾ ಕೇಂದ್ರದಿಂದ 5 ಕಿ.ಮೀ. ಹಾಗೂ ಕ್ಯಾತ್ಸಂದ್ರದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಸಿದ್ದಗಂಗೆ ಒಂದು ಬೆಟ್ಟ, ಈ ಬೆಟ್ಟದಲ್ಲಿ ವಿಶ್ವವಿಖ್ಯಾತ ಸಿದ್ದಗಂಗಾ ಮಠವಿದೆ. ಸಿದ್ಧಂಗೆಯನ್ನು ಕೇವಲ ಒಂದು ಬೆಟ್ಟ ಅಥವಾ ಮಠ ಎಂದಷ್ಟೇ ಹೇಳವುದು ಸರ್ವತಾ ಸಲ್ಲ. ಕಾರಣ ಇದು ಸಿದ್ಧಪುರುಷರ ತಪೋಬಲದಿಂದ, ವಿದ್ಯಾ ಸರಸ್ವತಿ ಕರುಣೆಯಿಂದ, ತಾಯಿ ಅನ್ನಪೂರ್ಣೇಶ್ವರಿಯ ದಯೆಯಿಂದ ಮಹಿಮಾನ್ವಿತವಾದ ತ್ರಿವಿಧ ದಾಸೋಹ ಕ್ಷೇತ್ರ.

ಐತಿಹ್ಯ:  ಈ ಕ್ಷೇತ್ರಕ್ಕೆ ಸುಮಾರು 600 ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ಕ್ಷೇತ್ರಕ್ಕೆ ಸಿದ್ದಗಂಗೆ ಎಂಬ ಹೆಸರು ಬಂದದ್ದು ಹೇಗೆ ಎಂಬುದನ್ನು ಇಲ್ಲಿರುವ ಕೃಷ್ಣ ಶಿಲಾ ಫಲಕ ಸಾರುತ್ತದೆ. ಅದರ ರೀತ್ಯ, 1300-1350ರಲ್ಲಿ ಅಂದರೆ 14ನೇ ಶತಮಾನದಲ್ಲಿ ಹರದನಹಳ್ಳಿ ಶೂನ್ಯ ಪೀಠ ಪರಂಪರೆಯ ಶ್ರೀ. ಗೋಸಲ ಸಿದ್ದೇಶ್ವರರು ಇಲ್ಲಿ (ಹಳೆಯ) ಮಠವನ್ನು ನಿರ್ಮಿಸಿ, ತಪಸ್ಸು ಆಚರಿಸುತ್ತಿದ್ದರಂತೆ. ಇಲ್ಲಿನ ಗುಹೆಯೊಂದರಲ್ಲಿ ತಪಸ್ಸು ಮಾಡುತ್ತಿದ್ದ ವೃದ್ಧರೊಬ್ಬರು ಮಧ್ಯರಾತ್ರಿಯ ಹೊತ್ತಿನಲ್ಲಿ ತೀವ್ರ ಬಾಯಾರಿಕೆಯಿಂದ, ಶ್ರೀ. ಗೋಸಲ ಸಿದ್ಧೆಶ್ವರರನ್ನು ಧ್ಯಾನಿಸಿದರಂತೆ. ಕೂಡಲೇ ಮಠದಿಂದ ಇಲ್ಲಿನ ಗವಿಗೆ ಬಂದು   ತಮ್ಮ ತಪಃಶಕ್ತಿಯಿಂದ ಈ ಬೆಟ್ಟದಲ್ಲಿನ ಒಂದು ಹೆಬ್ಬಂಡೆಯನ್ನು ಮಂಡಿಯಿಂದ ಮೆಟ್ಟಿದಾಗ ಅಲ್ಲಿ ಪಡುವು (ಗುಂಡಿ) ಬಿದ್ದು, ಗಂಗಾವತರಣ ಆಯಿತಂತೆ. ಇಂದಿಗೂ ಈ ಗಂಗಾವತರಣದ ಕುಂಡಿಕೆಯನ್ನು ನಾವಿಲ್ಲಿ ನೋಡಬಹುದು. ಭಕ್ತರು ಇಲ್ಲಿ ತೀರ್ಥ ಸ್ನಾನ ಮಾಡುತ್ತಾರೆ.  ಸಿದ್ಧೇಶ್ವರರಿಂದ ಗಂಗೆ ಅವತರಿಸಿದ ಬೆಟ್ಟ  ಸಿದ್ದಗಂಗೆಯಾಯಿತು ಎಂದು ತಿಳಿದುಬರುತ್ತದೆ. ಬಳಿಕ ಇಲ್ಲಿ ಎಡೆಯೂರು ಸಿದ್ದಲಿಂಗೇಶ್ವರರು 1470-80ರ ಅವಧಿಯಲ್ಲಿ ತಪೋನುಷ್ಠಾನ ಮಾಡಿ ಈ ಕ್ಷೇತ್ರವನ್ನು ಪಾವನಗೊಳಿಸಿದರು ಎಂದು ತಿಳಿದುಬರುತ್ತದೆ.

ಯಾ ಗಂಗಾ ಹರಶೀರ್ಷಸ್ಥಾ ವಾರಾಣಸ್ಯಾಂ ವಿರಾಜತೇ
ಸೈಪಾತ್ರಲೋಕ ಪಾಪಘ್ನೀ ಸಿದ್ಧಗಂಗೇತಿ ರಾಜತೇ ಎಂಬ ಶ್ಲೋಕವೂ ಇಲ್ಲಿದೆ.

ಸಿದ್ಧಗಂಗೆ ಬೆಟ್ಟ, ತುಮಕೂರು, Siddagan, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ge, God, Dr. Shvakumara swamiji.ಬೆಟ್ಟದ ಮೇಲೆ ಸುಂದರವಾದ ಶ್ರೀ. ಸಿದ್ದ ಲಿಂಗೇಶ್ವರರ ದೇವಾಲಯವಿದ್ದು, ದೇವಾಲಯಕ್ಕೆ ಹೋಗಲು ಮೆಟ್ಟಿಲುಗಳಿವೆ. ದೇವಾಲಯ ಸುಂದರವಾಗಿದ್ದು, ಮೇಲಿನ ಗೋಪುರಗಳಲ್ಲಿ ತಪಸ್ಸನ್ನಾಚರಿಸುತ್ತಿರುವ ಸಿದ್ದಲಿಂಗೇಶ್ವರರ ಸುತ್ತ ಹುತ್ತಾ ಬೆಳೆದಿದ್ದು, ಅದರ ಮೇಲೆ ನಿಂತು ಹಸು ಹಾಲು ಕರೆಯುತ್ತಿರುವ, ನಾಟ್ಯವಾಡುತ್ತಿರುವ ನಟರಾಜ ಹಾಗೂ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮೊದಲಾದ ದೇವತೆಗಳ ಹಲವು ವರ್ಣಮಯ ಗಾರೆಯ ಶಿಲ್ಪಗಳಿವೆ. ಪ್ರತಿ ಗಾರೆಗಚ್ಚಿನ ಗೋಪುರದ ಮೇಲೆ ಪಂಚ ಕಳಶಗಳಿವೆ.  ದೇವಾಲಯದೊಳಗೆ ಪ್ರವೇಶಿಸಲು ನಾಲ್ಕೂವರೆ ಅಡಿಯ ಎತ್ತರದ ಕಲ್ಲಿನ ದ್ವಾರವಿದೆ. ದೇವರ ಎದಿರು ಎಲ್ಲರೂ ಚಿಕ್ಕವರೆ ಹೀಗಾಗಿ ತಗ್ಗಿ ಬಗ್ಗಿ ನಡೆಯಲಿ ಎಂಬುದು ಈ ನಾಲ್ಕಡಿ ದ್ವಾರದ ಸಂಕೇತವಾಗಿದೆ. ಇದರ ಬಾಗಿಲವಾಡ ಸೂಕ್ಷ್ಮ, ಸುಂದರ ಕೆತ್ತನೆಗಳಿಂದ ಕೂಡಿದ್ದು, ಎಡ ಮತ್ತು ಬಲದಲ್ಲಿ ದ್ವಾರಪಾಲಕರ ಮೂರ್ತಿಗಳೂ ಇವೆ. ಮೇಲ್ಭಾಗದಲ್ಲಿ ಗಜಲಕ್ಷ್ಮಿಯ ವಿಗ್ರಹವಿದೆ.

ಸಿದ್ಧಗಂಗೆ ಬೆಟ್ಟ, ತುಮಕೂರು, Siddagange, God, Dr. Shvakumara swamiji., kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ದಾಸೋಹ: ಶ್ರೀಸಿದ್ಧಲಿಂಗೇಶ್ವರ ಸ್ವಾಮಿಗಳ ಈ ಕ್ಷೇತ್ರದ ಗದ್ದುಗೆಯನ್ನಲಂಕರಿಸಿದ ಶ್ರೀ.ಅಟವಿಸ್ವಾಮಿಗಳು ಈ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಅಡಿಗಲ್ಲನ್ನಿಟ್ಟರು. ಇವರು ಅನ್ನದಾಸೋಹದ ಜೊತೆಗೆ ಸಂಸ್ಕೃತಾಭ್ಯಾಸಕ್ಕೂ ಅವಕಾಶ ಕಲ್ಪಿಸಿ ಈ ಕ್ಷೇತ್ರವನ್ನು ಅನ್ನದಾಸೋಹ - ಜ್ಞಾನ ದಾಸೋಹದ ತಾಣವಾಗಿಸಿದರು. ಅವರ ಉತ್ತರಾಕಾರಿಗಳಾದ ಉದ್ಧಾನ ಶಿವಯೋಗಿಗಳು ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು. ಇವರು ಸಂಸ್ಕೃತ ಪಾಠಶಾಲೆಯನ್ನೇ ಆರಂಭಿಸಿದರು. ಶಿವರಾತ್ರಿಯ ಸಂದರ್ಭದಲ್ಲಿ ಜಾತ್ರೆಯ ಆಚರಣೆಯನ್ನೂ ಜಾರಿಗೆ ತಂದರು.

ಈ ಹೊತ್ತು ಸಿದ್ಧಗಂಗಾ ಕ್ಷೇತ್ರ ಅನ್ನ, ಅಕ್ಷರ ಹಾಗೂ ಜ್ಞಾನ ದಾಸೋಹಗಳಿಂದ ತ್ರಿವಿಧ ದಾಸೋಹ ಕ್ಷೇತ್ರವಾಗಿ ವಿಶ್ವಖ್ಯಾತಿ ಪಡೆದಿದೆ. ಈ ಎಲ್ಲ ಕೀರ್ತಿಯ ರೂವಾರಿಗಳು ಪರಮಪೂಜ್ಯರೂ 110 ವರ್ಷಗಳ ಶತಾಯುಷಿ, ನಡೆದಾಡುವ ದೇವರೆಂದೇ ಖ್ಯಾತರಾದ ಡಾ. ಶಿವಕುಮಾರ ಸ್ವಾಮಿಗಳು. ಶ್ರೀಗಳ ಅಂತಾರಾಷ್ಟ್ರೀಯ ಚಿಂತನೆ - ವಿದ್ವತ್ತು ಸಿದ್ಧಗಂಗೆಗೆ ರಾಷ್ಟ್ರೀಯ - ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದೆ.

3-3-1930ರಲ್ಲಿ ಶ್ರೀಉದ್ಧಾನ ಶಿವಯೋಗಿಗಳವರ ಉತ್ತರಾಧಿಕಾರಿಗಳಾಗಿ ಮಠದ ಅಧಿಕಾರವಹಿಸಿಕೊಂಡ ಕರ್ಮಯೋಗಿ ಶ್ರೀ ಶಿವಕುಮಾರ ಸ್ವಾಮಿಗಳು ಭಾರತೀಯ ಕೃಷಿ ಪರಂಪರೆಯ ಅಪೂರ್ವ ಚೇತನರಾಗಿ, ಗಾಂಧೀಜಿಯವರು ತೋರಿಸಿಕೊಟ್ಟ ಗ್ರಾಮಸ್ವರಾಜ್ಯದ ಕಲ್ಪನೆಯನ್ನೂ ಸಾಕಾರಗೊಳಿಸಿದ್ದಾರೆ.

ಧಾರ್ಮಿಕ ಕೇಂದ್ರವಾಗಿದ್ದ ನೆಲೆವೀಡನ್ನು ಶಿಕ್ಷಣಾರ್ಥಿಗಳ ಗುರುಕುಲವಾಗಿ ಮಾರ್ಪಡಿಸಿದ್ದಾರೆ. ನಿಶ್ಶಕ್ತರಿಗೆ ಆಶ್ರಯ ತಾಣವಾಗಿರುವ ಈ ಕ್ಷೇತ್ರದಲ್ಲಿ ಜಾತಿ ಮತಗಳ ಬೇಧವಿಲ್ಲ. ದೇಶಕ್ಕೆ ಮಾದರಿಯಾಗಿರುವ ಈ ಗುರುಕುಲದಲ್ಲಿ ಮನುಷ್ಯರೆಂದು ಕರೆಸಿಕೊಳ್ಳಲು ಅರ್ಹನಾದ ಎಲ್ಲ ಮಾನವೀಯ ವ್ಯಕ್ತಿಗೆ ಶಿಷ್ಯವೃತ್ತಿ ಕೈಗೊಳ್ಳುವ ಮುಕ್ತ ಅವಕಾಶ ಇದೆ.

ಸಿದ್ಧಗಂಗೆ ಬೆಟ್ಟ, ತುಮಕೂರು, Siddagange, God, Dr. Shvakumara swamiji., kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ಜ್ಞಾನ ದೇಗುಲ : ಸಿದ್ಧಗಂಗಾ ಕ್ಷೇತ್ರದ ಬೆಟ್ಟ ಪ್ರದೇಶದಲ್ಲಿರುವ ಗುಹೆಗಳಲ್ಲಿ ಹಲವು ಸಿದ್ಧರು ತಪವನ್ನಾಚರಿಸಿರುವ ಫಲವಾಗಿ ಪವಿತ್ರಭೂಮಿಯಾಗಿರುವ ಈ ತಾಣ ಶಾರದೆಯ ನೆಲೆವೀಡೂ ಆಗಿದೆ. ವಿದ್ಯಾ ವಿಹೀನ ಪಶುಃ ಅಂದರೆ, ವಿದ್ಯೆ ಇಲ್ಲದ ಮನುಷ್ಯ ಪಶುವಿಗೆ ಸಮಾನ ಎಂಬುದನ್ನು ಸಾರಿದ ಈ ಮಠದ ಎಲ್ಲ ಗುರುಗಳೂ ಸರ್ವರಿಗೂ ಸಮಾನ ಶಿಕ್ಷಣದ ಕೈಂಕರ್ಯವನ್ನೇ ಕೈಗೊಂಡು ವಿದ್ಯಾದಾನದ ಹಾಗೂ ವಿದ್ಯೆಯ ಮಹತ್ವವನ್ನು ಸಾರಿದ್ದಾರೆ. ಇದರ ಫಲವಾಗಿ ಇಂದು ಸಿದ್ಧಗಂಗೆ ಒಂದು ಜ್ಞಾನ ದೇಗುಲವಾಗಿದೆ. ವಿದ್ಯಾಸಂಸ್ಥೆಗಳ ಆಗರವಾಗಿದೆ. ಸಿದ್ಧಗಂಗೆಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿದ್ದಾರೆ.

ಉಚಿತ ಊಟ -ವಸತಿ : ಶ್ರೀಶಿವಕುಮಾರ ಸ್ವಾಮಿಗಳು ತಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ, ಅನ್ನದಾಸೋಹ - ಜ್ಞಾನದಾಸೋಹವನ್ನು ಅವಿರತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಶಿಕ್ಷಣಾರ್ಥಿಗಳಿಗೆ  ಉಚಿತ ಊಟ, ವಸತಿಯ ವ್ಯವಸ್ಥೆ ಇದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಇಲ್ಲಿ ಸಂಸ್ಕೃತ ಕಲಿಸಿಕೊಡಲಾಗುತ್ತದೆ. 20ನೇ ಶತಮಾನದ 20ರ ದಶಕದಲ್ಲಿ ಕೇವಲ 40 ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಿದ್ದ ಕ್ಷೇತ್ರದ ವಿದ್ಯಾರ್ಥಿ ನಿಲಯದಲ್ಲಿ ಈ ಹೊತ್ತು 15ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.

ಸಿದ್ಧಗಂಗೆ ಬೆಟ್ಟ, ತುಮಕೂರು, Siddagange, God, Dr. Shvakumara swamiji., kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ,  ಸರ್ವಧರ್ಮ ಸಮನ್ವಯ ಕೇಂದ್ರ : ಜಾತ್ಯತೀತವಾದ ಸರ್ವಧರ್ಮ ಸಮನ್ವಯಕ್ಕೆ ಹೆಸರಾದ ಈ ತಾಣದಲ್ಲಿ ಕೇವಲ ವೀರಶೈವ ಧರ್ಮದವರಷ್ಟೇ ಅಲ್ಲದೆ ವಿವಿಧ 64 ಕೋಮಿನ ವಿದ್ಯಾರ್ಥಿಗಳಿಗೂ ವಿದ್ಯಾದಾನ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಹಿಂದೂಪುರದಲ್ಲಿ ನೂರರಿಂದ ನೂರೈವತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಯನ್ನು ಕಲ್ಪಿಸಲಾಗಿದೆ. ಭಕ್ತಾದಿಗಳು ನೀಡುವ ಕಾಣಿಕೆಯಿಂದಲೇ ಈ ಸತ್ಕಾರ್ಯ ನಡೆಯುತ್ತಾ ಬಂದಿದೆ. ಶಿಕ್ಷಣ ಸೇವೆಯನ್ನೇ ಪ್ರಧಾನವಾಗಿಟ್ಟುಕೊಂಡ ಭಾರತದ ಏಕೈಕ ಮಠ ಸಿದ್ಧಗಂಗೆ ಎಂದರೂ ತಪ್ಪಲ್ಲ.

ಆರದ ಒಲೆ : ನೂರು ವರ್ಷಗಳ ಹಿಂದೆ ಇಲ್ಲಿನ ಪಾಕಶಾಲೆಯಲ್ಲಿ ಅನ್ನದಾಸೋಹಕ್ಕಾಗಿ ಹಚ್ಚಿದ ಒಲೆ ಇಂದಿಗೂ ಆರಿಲ್ಲ ಎಂದರೆ, ಇಲ್ಲಿನ ಅನ್ನದಾಸೋಹದ ಪರಿ ಅರ್ಥವಾದೀತು. ಇಂದು ಇಲ್ಲಿ ಏಕ ಕಾಲದಲ್ಲಿ 3೦೦೦ ಜನರು ಕುಳಿತು ಊಟ ಮಾಡಬಹುದಾದಷ್ಟು ದೊಡ್ಡ ಸುಸಜ್ಜಿತ ಪ್ರಸಾದ ನಿಲಯವಿದೆ. ಅಂದಿನ ರಾಷ್ಟ್ರಪತಿ ಶಂಕರದಯಾಳ ಶರ್ಮರು ಉದ್ಘಾಟಿಸಿದ ಬೃಹತ್‌ ಭವ್ಯ ವಿದ್ಯಾರ್ಥಿ ನಿಲಯ ಇದಾಗಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ಇನ್ನೂರು ಕೊಠಡಿಗಳಿವೆ. ಈ ಕೊಠಡಿಗಳಲ್ಲಿ 3000 ವಿದ್ಯಾರ್ಥಿಗಳಿದ್ದು, ಇವರಿಗೆ ಉಚಿತ, ಊಟ, ವಸತಿ ಹಾಗೂ ಶಿಕ್ಷಣ ಕಲ್ಪಿಸಲಾಗುತ್ತಿದೆ.

ಹಬ್ಬ ಹರಿದಿನಗಳಲ್ಲಿ ಬರುವ ಭಕ್ತರಿಗೂ ಇಲ್ಲಿ ಉಚಿತ ಊಟ- ವಸತಿ ಒದಗಿಸಲಾಗುತ್ತದೆ. ಶಿವರಾತ್ರಿಯ ಜಾತ್ರೆಯ ಕಾಲದಲ್ಲಿ ಹಾಗೂ ಏ.1.ರಂದು ಗುರುವಂದನೆಗಾಗಿ ಆಗಮಿಸುವ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಸ್ವಾಮಿಗಳ ದರ್ಶನ ಮಾಡಿ, ಸಿದ್ಧಗಂಗೆ ದೇವಾಲಯದ ದರ್ಶನ ಮಾಡಿ ಪುನೀತರಾಗುತ್ತಾರೆ.

 ಮಹಾದಾಸೋಹ ನಿಧಿ: ಇದಕ್ಕೆ ಎಷ್ಟೇ ಖರ್ಚು ತಗುಲುತ್ತಿದ್ದರೂ ಶ್ರೀಗಳು ದಾಸೋಹವನ್ನು ಮುಂದುವರಿಸಿದ್ದಾರೆ. ಈ ದಾಸೋಹ ನಿರಂತರವಾಗಿ ನಡೆಯಲೆಂದು ಮಹಾದಾಸೋಹ ನಿಧಿ ಸ್ಥಾಪಿಸಲಾಗಿದೆ.  ಸಾರ್ವಜನಿಕರೂ ಈ  ಈ ಮಹಾ ಅನ್ನದಾಸೋಹ ಸೇವೆಗೆ ನಿಗದಿತ ದೇಣಿಗೆ ನೀಡಿ ಸದಸ್ಯರಾಗಬಹುದು.

ಸಾಧನೆ : 1917ರಲ್ಲಿ ಆರಂಭಗೊಂಡ ವಿದ್ಯಾಶಾಲೆ 1973ರ ಹೊತ್ತಿಗೆ ಕಾಲೇಜು ಹಂತಕ್ಕೆ ಏರಿತು. ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣ ನೀಡಿದ ಕೀರ್ತಿ ಈ ಕ್ಷೇತ್ರಕ್ಕೆ ಸಲ್ಲುತ್ತದೆ. ಈ ಎಲ್ಲ ಸಾಧನೆಗಳ ರೂವಾರಿ ಡಾ. ಶಿವಕುಮಾರ ಸ್ವಾಮಿಗಳೆ. ಇವರ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಸಿದ್ಧಗಂಗೆ ಬೆಟ್ಟ, ತುಮಕೂರು, Siddagange, God, Dr. Shvakumara swamiji., kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ತಾಂತ್ರಿಕ ಶಿಕ್ಷಣ : ರಾಷ್ಟ್ರದ ಪ್ರಗತಿಗೆ ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಅನಿವಾರ್ಯ ಎಂಬುದನ್ನು ಸಾರಿದ ಸರ್.ಎಂ. ವಿಶ್ವೇಶ್ವರಯ್ಯನವರ ಸಲಹೆಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೀಗಳು ಕೇವಲ ಸಾಂಪ್ರದಾಯಿಕ ಶಿಕ್ಷಣದ ಜತೆ ವೃತ್ತಿ ಶಿಕ್ಷಣವನ್ನೂ ನೀಡಲು ಮುಂದಾದರು. ಇದರ ಫಲವಾಗಿ 1963ರಲ್ಲೇ ಇಲ್ಲಿ ತಾಂತ್ರಿಕ ಕಾಲೇಜು ಆರಂಭವಾಯಿತು. ಇಂದು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೂ ಸೇರಿದಂತೆ, ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಸಂಸ್ಥೆಯ ವತಿಯಲ್ಲಿ ಔಷಧ ವಿಜ್ಞಾನ, ನರ್ಸಿಂಗ್ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು, ಅಂಧ ಮಕ್ಕಳ ಶಾಲೆ, ಕಲೆ -ವಾಣಿಜ್ಯ -ವಿಜ್ಞಾನ ಶಿಕ್ಷಣ ಕಾಲೇಜು, ಸಂಗೀತ ಶಾಲೆಗಳೂ ನಡೆಯುತ್ತಿವೆ.

ಶಿವರಾತ್ರಿ ಜಾತ್ರೆ : ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಜಾನುವಾರು ಜಾತ್ರೆಗೆ  ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದಿಂದಲೂ ಜಾನುವಾರುಗಳು ಆಗಮಿಸುತ್ತವೆ. ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರುವ ದನಕರುಗಳನ್ನು ಇಲ್ಲಿ ಜನ ಕೊಳ್ಳುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ.

ಜಾತ್ರೆಯ ಸಂದರ್ಭದಲ್ಲಿ ಮುತ್ತಿನ ಪಾಲಕಿ ಉತ್ಸವ, ರಥೋತ್ಸವ, ಬೆಳ್ಳಿ ಪಾಲಕಿ ಉತ್ಸವ, ತೆಪ್ಪೋತ್ಸವ, ಪಂಚಬ್ರಹ್ಮೋತ್ಸವವೇ ಮೊದಲಾದ 19 ಉತ್ಸವಗಳೂ ಜರುಗುತ್ತವೆ. ಜಾತ್ರೆಯ ಅಂಗವಾಗಿ ನಡೆವ ಮದ್ದು (ಪಟಾಕಿ) ಸಿದ್ಧಗಂಗೆ ಬೆಟ್ಟ, ತುಮಕೂರು, Siddagange, God, Dr. Shvakumara swamiji., kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ಗುಂಡುಗಳ ಸುರಿಮಳೆ, ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತವೆ.

ಕೃಷಿ ಕೈಗಾರಿಕೆ ಮಾಹಿತಿ: ಔಪಚಾರಿಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ತರುತ್ತಿರುವ ಕ್ಷೇತ್ರ ಜಾತ್ರೆಯ ಸಂದರ್ಭದಲ್ಲಿ ರೈತರಿಗೆ ಕೃಷಿ -ಕೈಗಾರಿಕೆ ಮಾಹಿತಿಯನ್ನೂ ನೀಡುತ್ತದೆ. ಇದಕ್ಕಾಗೇ ಸುಸಜ್ಜಿತ ವಸ್ತುಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸುತ್ತದೆ. ರಾಜ್ಯದ ಗ್ರಾಮೀಣ ಜನರಿಗೆ ವೈಜ್ಞಾನಿಕ ಮಾಹಿತಿ ಒದಗಿಸುವ ಸಲುವಾಗಿ 16 ದಿನಗಳ ಕಾಲ ನಡೆವ ಈ ಕೃಷಿ - ಕೈಗಾರಿಕೆ ವಸ್ತು ಪ್ರದರ್ಶನ ನಾಡಿನಾದ್ಯಂತ ಮನೆಮಾತಾಗಿದೆ. ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಅಭಿವೃದ್ಧಿ ಇಲಾಖೆಗಳೂ ಪಾಲ್ಗೊಳ್ಳುತ್ತವೆ. ವಸ್ತು ಪ್ರದರ್ಶನ ಆವರಣದಲ್ಲಿ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ.

ಜಾತ್ರೆಯ ಅಂಗವಾಗಿ ನಡೆಯುವ ವೈಭವದ ರಥೋತ್ಸವ ನೋಡಲು, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಕರ್ನಾಟಕ, ತುಮಕೂರು, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಎಲ್ಲ ಭಕ್ತರಿಗೂ ಜಾತ್ರೆಯ ಸಂದರ್ಭದಲ್ಲಿ (10 ದಿನಗಳ ಕಾಲ) ಉಚಿತ ಊಟ ಮತ್ತು ವಸತಿಯನ್ನು ಶ್ರೀಮಠ ಕಲ್ಪಿಸುತ್ತದೆ. ಸಿದ್ಧಗಂಗೆಯ ಊಟ ಚೆನ್ನ ಶಿವಗಂಗೆಯ ನೋಟ ಚೆನ್ನ ಎಂಬ ಜನಜನಿತ ಮಾತೂ ಇಲ್ಲಿ ಜನಜನಿತವಾಗಿದೆ.

ಪ್ರಕಾಶನ: ಶ್ರೀಮಠವು ಕಳೆದ 37 ವರ್ಷಗಳಿಂದ ಸಿದ್ಧಗಂಗಾ ಎಂಬ ಮಾಸಪತ್ರಿಕೆಯನ್ನೂ ಹೊರತರುತ್ತಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿ, ವಿe, ಆಧ್ಯಾತ್ಮಿಕ ಮಾಹಿತಿಗಳನ್ನೂ ನೀಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ನೈತಿಕ - ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಇದು ಸಮರ್ಥವಾಗಿ ಮಾಡುತ್ತಿದೆ.

(ಆಧಾರ) 

ಮುಖಪುಟ /ನಮ್ಮದೇವಾಲಯಗಳು