ಮುಖಪುಟ /ನಮ್ಮ ದೇವಾಲಯಗಳು  

ಚೌಡೇಶ್ವರಿಯ ನೆಲೆವೀಡು ಸಿಗಂದೂರು

ಕಳ್ಳ-ಕಾಕರರ ಕಾಟದಿಂದ ಕಾಪಾಡುವ ತಾಯಿ...

*ಟಿ.ಎಂ.ಸತೀಶ್

 history of Sigandur Chowdeshwari, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಸಿಗಂದೂರು ಚೌಡೇಶ್ವರಿ, ಸಾಗರ,  ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಶರಾವತಿ (ಲಿಂಗನಮಕ್ಕಿ ಅಣೆಕಟ್ಟೆ) ಹಿನ್ನೀರು ಹಾಗೂ ತುಮರಿ ಬಳಿಯ ವನಪ್ರದೇಶದಲ್ಲಿರುವ ಸಿಗಂದೂರು ಚಿಕ್ಕ ಊರಾದರೂ, ಇದರ ಖ್ಯಾತಿ ಮಾತ್ರ ಬಹು ದೊಡ್ಡದು. ಈ ಊರಿಗೆ, ಖ್ಯಾತಿ, ಕೀರ್ತಿ ಬರಲು ಇಲ್ಲಿ ನೆಲೆಸಿಹ ತಾಯಿ ಚೌಡೇಶ್ವರಿಯೇ ಕಾರಣ.

ಸಿಗಂದೂರಿನಲ್ಲಿರುವ  ಜಗದ್ರಕ್ಷಕಿ ಚೌಡೇಶ್ವರಿ, ಬೇಡಿದ ವರ ನೀಡುವ ಕರುಣಾಮಯಿ. ಬಡವ ಬಲ್ಲಿದ, ಮೇಲು ಕೀಳು ಎಂಬ ಯಾವ ಭೇದವಿಲ್ಲದೆ, ತನ್ನಲ್ಲಿಗೆ ಬರುವ ಭಕ್ತರ ಬೇಡಿಕೆಯನ್ನು ಈಡೇರಿಸುತ್ತಾಳೆ ಎಂಬುದು ಭಕ್ತರ ನಂಬಿಕೆ.

ಪ್ರಸ್ತುತ ಇರುವ ದೇವಾಲಯ ನಿರ್ಮಾಣವಾದದ್ದು 1990ರಲ್ಲಿ. ಆದರೆ, ಇಲ್ಲಿರುವ ಮೂಲ ದೇವಿಗೆ 300 ವರ್ಷಗಳ ಇತಿಹಾಸವಿದೆ. 1990ಕ್ಕೂ ಮೊದಲು ಸಿಂಗದೂರಿನಿಂದ 2 ಕಿ.ಮೀ. ದೂರದಲ್ಲಿರುವ ಸಿಗಿಕಣಿ ಎಂಬ ಸ್ಥಳದಲ್ಲಿ ಮೂಲ ಸನ್ನಿಧಾನ ಇತ್ತು. ಆ ದೇವಿಯನ್ನು ಇಲ್ಲಿಗೆ ತಂದು ಪ್ರತಿಷ್ಠಾಪನೆ ಮಾಡಲಾಗಿದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ ಅವರು.

 history of Sigandur Chowdeshwari, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಸಿಗಂದೂರು ಚೌಡೇಶ್ವರಿ, ಸಾಗರ,  ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalist25 ವರ್ಷಗಳಿಂದೀಚೆಗೆ ದೇವಾಲಯ ತಾಯಿಯ ಮಹಿಮೆಯಿಂದ ಜಗದ್ವಿಖ್ಯಾತವಾಗಿದೆ. 1990ಕ್ಕೂ ಮುನ್ನ  ಇಲ್ಲಿಗೆ ದಿನಕ್ಕೆ 5-10 ಭಕ್ತರಷ್ಟೇ ಆಗಮಿಸುತ್ತಿದ್ದರು. ಆದರೆ ಈಗ ನಿತ್ಯ ಸಾವಿರಾರು ಭಕ್ತರು, ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ತಾಯಿಯ ದರ್ಶನಕ್ಕೆ ಬರುತ್ತಾರೆ. ಶುಕ್ರವಾರ ಮಂಗಳವಾರಗಳಂದು 5-10 ಸಾವಿರ ಭಕ್ತರು ಬಂದರೆ, ಅಮಾವಾಸ್ಯೆ, ಹುಣ್ಣಿಮೆಯ ದಿನ 40-50 ಸಾವಿರ  ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸಂಕ್ರಾಂತಿಯ ಸಂದರ್ಭದಲ್ಲಿ ನಡೆಯುವ ಜಾತ್ರೆಯ ಸಮಯದಲ್ಲಂತೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಎಂದು ಹೇಳುತ್ತಾರೆ.

ಸಿಗಂದೂರು ಚೌಡೇಶ್ವರಿಗೆ ಪ್ರಾತಃಕಾಲದ ಪೂಜೆ ವಿಶೇಷವಾದ್ದು. ಹೀಗಾಗಿ ಬೆಳಗಿನ ಜಾವ 3-30ರ ಪೂಜೆ ನೋಡಲೆಂದೇ ಭಕ್ತರು ಆಗಮಿಸುತ್ತಾರೆ. ಇಲ್ಲಿಯೇ ಇರುವ ವಸತಿ ನಿಲಯಗಳಲ್ಲಿ ತಂಗಿದ್ದು. ದೇವಿ ದರ್ಶನ ಮಾಡುತ್ತಾರೆ. ಪ್ರಾತಃಕಾಲದ ಪೂಜೆ ಮಾಡಿಸಿ, ತಾಯಿಗೆ ಅರ್ಚಕ ಮುಖೇನ ಕಷ್ಟ ನಿವೇದಿಸಿಕೊಂಡರೆ ಆ ಕಷ್ಟ ಪರಿಹಾರವಾಗುತ್ತದೆ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ದೊರಕುತ್ತದೆ, ವಸತಿ ರಹಿತರಿಗೆ ಸ್ವಂತ ಸೂರು ಸಿಗುತ್ತದೆ, ವಿದ್ಯಾರ್ಥಿಗಳು, ಉದ್ಯೋಗಿಗಳು ಯಶಸ್ಸು ಕಾಣುತ್ತಾರೆ ಎಂದು ಪ್ರಧಾನ ಅರ್ಚಕರು ತಿಳಿಸುತ್ತಾರೆ.

ಜನವಸತಿಯಿಂದ ದೂರವಾಗಿ ಕಾನನದ ಮಧ್ಯೆ ಅದೂ ಹೊಳೆ ದಾಟಿ ಬರಬೇಕಾದ ಇಂಥ ನಿರ್ಜನ ಸ್ಥಳದಲ್ಲಿರುವ ದೇವಿಯ ಕಾಣಲು ಲಕ್ಷಾಂತರ ಜನರು ಬರುತ್ತಾರೆ ಎಂದರೆ ದೇವಿಯಲ್ಲಿ ಅಂಥ ಶಕ್ತಿ ಇದೆ ಎಂಬುದು ವೇದ್ಯವಾಗುತ್ತದೆ ಎಂದೂ ಹೇಳುತ್ತಾರೆ.

 history of Sigandur Chowdeshwari, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಸಿಗಂದೂರು ಚೌಡೇಶ್ವರಿ, ಸಾಗರ,  ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistದೇವಾಲಯದಲ್ಲಿ ಮತ್ತೂ ಒಂದು ವಿಶೇಷವಿದೆ. ಈ ದೇವಿಯ ಮೊರೆ ಹೋದರೆ ಕಳ್ಳ ಕಾಕರ ಬಾಧೆ ಇರುವುದಿಲ್ಲವಂತೆ. ಹೀಗಾಗಿಯೇ ದೇವಾಲಯದಲ್ಲಿ ಶ್ರೀದೇವಿಯ ರಕ್ಷಣೆ ಇದೆ ಎಂಬ ಬೋರ್ಡ್ ನೀಡುವ ಪದ್ಧತಿ ಇದೆ. ಇಲ್ಲಿ ದೇವರಿಗೆ ಮೊರೆ ಹೋಗಿ ಈ ಫಲಕ ತೆಗೆದುಕೊಂಡು ಹೋಗಿ, ತಮ್ಮ, ಹೊಲ, ಗದ್ದೆ, ತೋಟ, ಮನೆಯಲ್ಲಿ ಹಾಕಿದರೆ ದೇವಿಯೇ ಭಕ್ತರನ್ನು ಕಳ್ಳರಿಂದ ರಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ. ಇಂಥ ಹರಕೆ ಹೊತ್ತ ಕಳ್ಳರ ಮನೆಯಲ್ಲಿ ಕಳುವಾದರೆ ತಾಯಿ ಉಗ್ರವಾಗಿ ಶಿಕ್ಷಿಸುತ್ತಾಳೆ, ಕಳೆದ ವಸ್ತು ಮರಳಿ ಸಿಗುತ್ತದೆ ಎಂಬ ನಂಬಿಕೆ ಇದೆ.  

ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. 60 ಕೊಠಡಿಗಳ ವಸತಿ ನಿಲಯ ನಿರ್ಮಿಸಲಾಗಿದೆ. ಭಕ್ತರಿಗಾಗಿ ದಾಸೋಹವೂ ಇದೆ. ವಿವಾಹಾದಿ ಶುಭ ಕಾರ್ಯ ಮಾಡುವವರಿಗಾಗಿ ಕಲ್ಯಾಣ ಮಂಟಪವನ್ನೂ ನಿರ್ಮಿಸಲಾಗಿದೆ.

 history of Sigandur Chowdeshwari, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಸಿಗಂದೂರು ಚೌಡೇಶ್ವರಿ, ಸಾಗರ,  ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistಮಾರ್ಗ: ಸಾಗರದಿಂದ ಆವಿನಹಳ್ಳಿ ದಾರಿಯಲ್ಲಿ ಹೊಳೆ ಬಾಗಿಲುವರೆಗೆ ರಸ್ತೆ ಮಾರ್ಗವಿದೆ. ಹೊಳೆಬಾಗಿಲಿನಿಂದ ಆಚೆ ದಡಕ್ಕೆ ಲಾಂಚ್ ಮೂಲಕವೇ ಹೋಗಬೇಕು. ಬಸ್, ಕಾರು ಇತ್ಯಾದಿ ವಾಹನಗಳನ್ನೂ ಈ ಲಾಂಚ್ ಆಚೆ ದಡ ಸೇರಿಸುತ್ತದೆ. ಒಬ್ಬರಿಗೆ 1 ರೂಪಾಯಿಯಷ್ಟೇ ಪಡೆಯಲಾಗುತ್ತದೆ. ವಾಹನಗಳಿಗೆ 5 ರೂಪಾಯಿ ಮಾತ್ರ. ಹೊಳೆಯ ಆಚೆಯ ದಡದಿಂದ 5 ಕಿ.ಮೀಟರ್ ಕಾನನ ಪ್ರದೇಶದಲ್ಲಿರುವ ದೇವಾಲಯಕ್ಕೆ ತೆರಳಲು ಖಾಸಗಿ ವಾಹನ ಸೌಲಭ್ಯವಿದೆ.

ಕೊಲ್ಲೂರು ಕಡೆಯಿಂದ ಬರುವವರು ನಾಗೊಡ್ಡಿ ಘಟ್ಟವನ್ನು ದಾಟಿ ತುಮರಿ ಮಾರ್ಗವಾಗಿ ರಸ್ತೆಯ ಮೂಲಕವೇ ಸಿಗಂದೂರಿಗೆ ಬರಬಹುದು. 

ಸಂಪರ್ಕ- ಎಸ್. ರಾಮಪ್ಪ, ಧರ್ಮದರ್ಶಿಗಳು 08186-210522, ಎಸ್.ಪಿ. ಶೇಷಗಿರಿ ಭಟ್ ಪ್ರಧಾನ ಅರ್ಚಕರು -08186 -210555. 

(ಚಿತ್ರ ಕೃಪೆ- ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ ಟ್ರಸ್ಟ್ (ರಿ)

ಮುಖಪುಟ /ನಮ್ಮ ದೇವಾಲಯಗಳು