ಮುಖಪುಟ /ನಮ್ಮ ದೇವಾಲಯಗಳು  

 

ಶ್ರೀಕ್ಷೇತ್ರ ಸೋಮೇಶ್ವರ

ಮಂಗಳೂರು ಬಳಿಯ ಕಡಲ ತಡಿಯ ಸೋಮನಾಥನ ರಮ್ಯ ಪುಣ್ಯಕ್ಷೇತ್ರ

Someshwara, Kotekar, Dakshina Kannada, ಸೋಮೇಶ್ವರ, ಕೋಟೆಕಾರ್, ದಕ್ಷಿಣ ಕನ್ನಡ, ಮಂಗಳೂರು, ದೇವಾಲಯ, ಉಳ್ಳಾಲ, ಬೀಚ್, ಜ್ಯೋತಿರ್ಲಿಂಗ, ಕನ್ನಡರತ್ನ., ದೇವಾಲಯಗಳು, ಟಿ.ಎಂ. ಸತೀಶ್, T.M.Satish, Kannadaratna.com, Temples of Karnataka, ourtemples.in, mangalore, Someshwara, kotekar*ಟಿ.ಎಂ.ಸತೀಶ್

ಬಂದರು ನಗರಿ ಮಂಗಳೂರು ನಗರದ ದಕ್ಷಿಣಕ್ಕೆ ಸುಮಾರು 12-13 ಕಿ.ಮೀ ದೂರದಲ್ಲಿ ಕೋಟೇಕಾರ್ ವ್ಯಾಪ್ತಿಯ ಸಮುದ್ರದ ದಂಡೆಯ ಮೇಲಿರುವ ಪುಟ್ಟ ಬೆಟ್ಟದ ಮೇಲಿರುವ ರಮ್ಯತಾಣ ಹಾಗೂ ಪುಣ್ಯಕ್ಷೇತ್ರವೇ ಸೋಮೇಶ್ವರ. ಇಲ್ಲಿರುವ ಪುರಾತನ ಸೋಮನಾಥ ದೇವಾಲಯದಿಂದಾಗಿಯೇ ಈ ರಮಣೀಯ ಕಡಲ ಕಿನಾರೆಗೆ ಸೋಮೇಶ್ವರ ಎಂಬ ಹೆಸರೇ ಬಂದಿದೆ.

ಸೋಮನಾಥ ನಿಸರ್ಗ ರಮಣೀಯವಾದ ಸುಂದರ ಪ್ರದೇಶವಾಗಿ, ನಾಸ್ತಿಕ, ಆಸ್ತಿಕರಿಬ್ಬರನ್ನೂ ಕೈಬೀಸಿ ಕರೆಯುತ್ತದೆ. ಸಂಜೆಯ ಸೂರ್ಯಾಸ್ತವನ್ನು ಇಲ್ಲಿನ ಬೆಟ್ಟದ ಮೇಲೆ ಕುಳಿತು ಇಲ್ಲವೇ ಅಲೆಗಳು ಅಪ್ಪಳಿಸುವ ತೀರದಲ್ಲಿ ನಿಂತು ನೋಡುವುದೇ ಒಂದು ಅದ್ಭುತ ಅನುಭವ. ಕೆಂಪು ಸೂರ್ಯ ಕಿರಣಗಳಿಂದ ನಸುಗೆಂಪಾಗಿ ಕಾಣುವ ಪಡುಗಡಲ ಅಲೆಗಳು ಆಗಾಗ್ಗೆ ಬಂದು ಈ ಬೆಟ್ಟಕ್ಕೆ ಅಪ್ಪಳಿಸುವುದನ್ನು ನೋಡುವುದೇ ಒಂದು ಸೊಬಗು.

ಸೋಮೇಶ್ವರಲಿಂಗ ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಸೌರಾಷ್ಟ್ರದಲ್ಲಿ ಸೋಮನಾಥನ ಮೂಲ ಜ್ಯೋತಿರ್ಲಿಂಗವಿದ್ದರೂ. ರಾಜ್ಯದ ಸೋಮನಾಥಪುರ, ಸುತ್ತೂರು, ಬೆಂಗಳೂರು ಬಳಿಯ ಹಲಸೂರು, ಪುಲಿಗೆರೆ, ಕೋಲಾರ ಸೇರಿದಂತೆ ಅನೇಕ ಕಡೆಗಳಲ್ಲಿ ಪವಿತ್ರ ಸೋಮೇಶ್ವರ ದೇವಸ್ಥಾನಗಳಿವೆ.

ಹೀಗಾಗಿಯೇ ಈ ಸೋಮನಾಥನ ದರ್ಶನಕ್ಕೂ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಹಿಂದೆ ಉಳ್ಳಾಲ ಮಾಗಣೆಗೆ ಸೇರಿದ್ದ ಸೋಮನಾಥ ದೇವಾಲಯ, ಈ ಪ್ರದೇಶದ ಪ್ರಮುಖ ಹಾಗೂ ಪ್ರಧಾನ ದೇವಾಲಯವಾಗಿತ್ತು. ದೇಗುಲದ ಹಿಂಬದಿ ಶಿವನ ಪಾದದ ಗುರುತು ಇದೆ ಎನ್ನಲಾಗುವ ಪಡುಗಡಲ ರುದ್ರಪಾದೆಯಲ್ಲಿ ಭಕ್ತರು ಸಮುದ್ರಸ್ನಾನ ಮಾಡಿ, ಪಿತೃಶ್ರಾದ್ಧ(ತರ್ಪಣ) ನೆರವೇರಿಸಿ ದೇವರನ್ನು ಪೂಜಿಸುತ್ತಿದ್ದರು ಎಂದು ಇತಿಹಾಸ ಸಾರುತ್ತದೆ. ಈ ಬಗ್ಗೆ ಸ್ಕಾಂದ ಪುರಾಣದಲ್ಲಿಯೂ ಉಲ್ಲೇಖವಿದೆಯಂತೆ. ಪ್ರಾಚೀನ ಕಾಲದಲ್ಲಿ ಕೌಂಡಿನ್ಯ ಮಹರ್ಷಿ ಇಲ್ಲಿ ಪಿತೃ ತರ್ಪಣ ನೀಡಿದ್ದರೆಂದೂ, ಅವರೇ ಬೆಟ್ಟದ ಮೇಲೆ ಶಿವಲಿಂಗ ಸ್ಥಾಪಿಸಿ ಪೂಜಿಸಿದ್ದರೆಂದೂ ಅಂದಿನಿಂದ ಇಲ್ಲಿ ಪಿತೃ ಕಾರ್ಯ ನಡೆಯುತ್ತಾ ಬಂದಿದೆ ಎಂದೂ ಗ್ರಾಮದ ಹಿರಿಯರು ಹೇಳುತ್ತಾರೆ.

Someshwara, Kotekar, Dakshina Kannada, ಸೋಮೇಶ್ವರ, ಕೋಟೆಕಾರ್, ದಕ್ಷಿಣ ಕನ್ನಡ, ಮಂಗಳೂರು, ದೇವಾಲಯ, ಉಳ್ಳಾಲ, ಬೀಚ್, ಜ್ಯೋತಿರ್ಲಿಂಗ, ಕನ್ನಡರತ್ನ., ದೇವಾಲಯಗಳು, ಟಿ.ಎಂ. ಸತೀಶ್, T.M.Satish, Kannadaratna.com, Temples of Karnataka, ourtemples.in, mangalore, Someshwara, kotekarಕ್ರಿ.ಶ. 567-1325ರವರೆಗೆ ಈ ನಾಡನ್ನಾಳಿದ ಆಲೂಪ ರಾಜ ವಂಶದ ಕುಲಶೇಖರ ಎಂಬಾತ ಈ ದೇವಸ್ಥಾನ ಕಟ್ಟಿಸಿದ ಎಂದು ಹೇಳಲಾಗುತ್ತದೆ. ಆದರೆ ಕುಮಾರಸ್ವಾಮಿ ಮತ್ತು ಸಪ್ತ ಮಾತೃಕೆಯರ ಆರಾಧಕನಾಗಿದ್ದ ಬನವಾಸಿ ಕದಂಬರ ದೊರೆ ಮಹಾಸೇನನ ಕಾಲದಲ್ಲಿ ಈ ದೇವಾಲಯ ಇತ್ತು  ಎಂಬ ವಾದವೂ ಇದೆ. ಇದಕ್ಕೆ ಸೋಮನಾಥನ ದೇವಾಲಯದ ನೈಋತ್ಯದಲ್ಲಿರುವ ಪ್ರಾಚೀನ ಸಪ್ತಮಾತೃಕಾ ಮೂರ್ತಿಗಳ ಪುಷ್ಟಿಯನ್ನೂ ನೀಡುತ್ತಾರೆ.   ನಂತರ  ಉಳ್ಳಾಲದ ಚೌಟ ಅರಸರು ಸೋಮನಾಥನನ್ನು ತಮ್ಮ  ಆರಾಧ್ಯ ದೈವನೆಂದು ಪೂಜಿಸುತ್ತಿದ್ದರು. ಅಬ್ಬಕ್ಕ ದೇವಿ ಕೂಡ ಈ ದೇವಾಲಯಕ್ಕೆ ಹಲವು ಕಾಣಿಕೆ ನೀಡಿದ್ದಾಳೆ ಎಂದು ಇತಿಹಾಸ ಹೇಳುತ್ತದೆ

Someshwara, Kotekar, Dakshina Kannada, ಸೋಮೇಶ್ವರ, ಕೋಟೆಕಾರ್, ದಕ್ಷಿಣ ಕನ್ನಡ, ಮಂಗಳೂರು, ದೇವಾಲಯ, ಉಳ್ಳಾಲ, ಬೀಚ್, ಜ್ಯೋತಿರ್ಲಿಂಗ, ಕನ್ನಡರತ್ನ., ದೇವಾಲಯಗಳು, ಟಿ.ಎಂ. ಸತೀಶ್, T.M.Satish, Kannadaratna.com, Temples of Karnataka, ourtemples.in, mangalore, Someshwara, kotekarಈಗಿನ ಗುಜರಾತ್ ಪ್ರದೇಶ ಆಳುತ್ತಿದ್ದ ವೀರಬಾಹು ಎಂಬ ರಾಜ, ತನ್ನ ವಿವಾಹಿತ ಪುತ್ರಯ ವಸ್ತ್ರ ಎಳೆದ ತಪ್ಪಿಗಾಗಿ ತನ್ನ ಕೈಗಳನ್ನೇ ಕತ್ತರಿಸಿಕೊಂಡನಂತೆ. ಬಳಿಕ ಬಂಗಾರದ ಕೃತಕ ಕೈ ಮಾಡಿಸಿ ಹಾಕಿಕೊಂಡನಂತೆ. ಹೀಗಾಗಿ ಅವನಿಗೆ ಕನಕಬಾಹು ಎಂಬ ಹೆಸರೂ ಬಂತಂತೆ. ಪಾಪ ಪ್ರಾಯಶ್ಚಿತ್ತಕ್ಕಾಗಿ ಹಡಗಲ್ಲಿ ಗೋಕರ್ಣದ ಆತ್ಮಲಿಂಗ ದರ್ಶನಕ್ಕೆ ಬರುವಾಗ, ಬಿರುಗಾಳಿಯ ರಭಸಕ್ಕೆ ಸಿಕ್ಕಿ, ಆತ ಪ್ರಯಾಣಿಸುತ್ತಿದ್ದ ಹಡಗು ಒಡೆದು ಸಮುದ್ರದ ಪಾಲಾಯಿತಂತೆ. ಮುರಿದ ಹಲಗೆಯ ಆಶ್ರಯ ಪಡೆದ ಕನಕಬಾಹುವನ್ನು ಅಲೆಗಳು ಈ ಸೋಮೇಶ್ವರ ಬೆಟ್ಟದ ರುದ್ರಪಾದದ ಮೇಲೆ ತಂದು ಎಸೆದವಂತೆ. ಅವನಿಗೆ ಎಚ್ಚರವಾದಾಗ, ಆ ಸ್ಥಳದಲ್ಲಿ ಹಸು ಮತ್ತು ಹುಲಿ ಎರಡೂ ಸೌಹಾರ್ದಯುತವಾಗಿ ಜೀವಿಸುತ್ತಿರುವುದನ್ನು ಕಂಡ ಚಕಿತನಾದನಂತೆ. ಅಲ್ಲಿಯೇ ಅಶ್ವತ್ಥಕಟ್ಟೆಯಲ್ಲಿ ಕುಳಿತು ಈ ಬಗ್ಗೆ ಚಿಂತಿಸುತ್ತಿದ್ದ ಕನಕಬಾಹುವಿಗೆ ಅಶರೀರವಾಣಿ ಕೇಳಿತಂತೆ. ಲಿಂಗರೂಪದಲ್ಲಿ ನಾನು ಇಲ್ಲಿ ನೆಲೆಸಿದ್ದು, ನೀನು ನನಗೆ ಗುಡಿ ಕಟ್ಟಿದರೆ, ನಿನಗೆ ಕೈ ಮರಳಿ ಬರುತ್ತದೆ ಎಂದು ಆ ವಾಣಿ ಹೇಳಿತಂತೆ.  ಆಶ್ಚರ್ಯಗೊಂಡು, ಹುಡುಕಿದಾಗ ಕುರುಚುಲು ಗಿಡಗಳ ಪೊದೆಯಲ್ಲಿ ಅವನಿಗೆ ಶಿವಲಿಂಗ ಕಾಣಿಸಿತಂತೆ. ಕನಕಬಾಹು ತನ್ನ ಚಿನ್ನದ ಕೃತಕ ಕೈ ಮಾರಿ ಅದರ ಹಣದಲ್ಲಿ ಇಲ್ಲಿ ಶಿವಾಲಯ ಕಟ್ಟಿಸಿದಾಗ, ಅವನಿಗೆ ನಿಜವಾದ ಕೈ ಮೂಡಿತೆಂದೂ ಹೇಳಲಾಗುತ್ತದೆ.

Someshwara, Kotekar, Dakshina Kannada, ಸೋಮೇಶ್ವರ, ಕೋಟೆಕಾರ್, ದಕ್ಷಿಣ ಕನ್ನಡ, ಮಂಗಳೂರು, ದೇವಾಲಯ, ಉಳ್ಳಾಲ, ಬೀಚ್, ಜ್ಯೋತಿರ್ಲಿಂಗ, ಕನ್ನಡರತ್ನ., ದೇವಾಲಯಗಳು, ಟಿ.ಎಂ. ಸತೀಶ್, T.M.Satish, Kannadaratna.com, Temples of Karnataka, ourtemples.in, mangalore, Someshwara, kotekarದೇವಾಲಯದ ಇತಿಹಾಸ ತ್ರೇತಾಯುಗದ  ರಾಮಾಯಣ, ದ್ವಾಪರದ ಮಹಾಭಾರತದ ಕಾಲಕ್ಕೂ ಹೋಗುತ್ತದೆ. ಹಿಂದೆ ದಂಡಕಾರಣ್ಯ ಎಂದು ಹೆಸರಾಗಿದ್ದ ಈ ಪ್ರದೇಶವನ್ನೆಲ್ಲಾ ರಾವಣನ ಬಂಧು, ಖರಾಸುರ ಎಂಬ ರಾಕ್ಷಸ ಆಳುತ್ತಿದ್ದನಂತೆ. ಆತನೆ ಇಲ್ಲಿ ಹಲವಾರು ಶಿವಾಲಯ ಕಟ್ಟಿದ್ದು, ಇದು ಖರಾಸುರ ಪ್ರತಿಷ್ಠೆ ಎಂದೂ ಅರ್ಚಕರು ಹೇಳುತ್ತಾರೆ. ಇನ್ನು ಮಹಾಭಾರತ ಕಾಲದಲ್ಲಿ, ಅರಗಿನ ಅರಮನೆ ಸುಟ್ಟಾಗ, ಮಾರುವೇಷದಲ್ಲಿ ತಪ್ಪಿಸಿಕೊಂಡ ಪಾಂಡವರು, ಸೋಮೇಶ್ವರ ಬೆಟ್ಟದ ಮೇಲೆ ಕೆಲ ಕಾಲ ಉಳಿದಿದ್ದರಂತೆ. ಇಲ್ಲಿ ಸ್ನಾನ ಮಾಡಲು ಭೀಮ ತನ್ನ ಗದೆಯಿಂದ ನೆಲಕ್ಕೆ ಅಪ್ಪಳಿಸಿದಾಗ ಕೆರೆ ಆಯಿತಂತೆ. ಅದುವೆ ದೇವಾಲಯದ ಬಳಿ ಇರುವ ಗದಾತೀರ್ಥ ಎಂದೂ ಹೇಳುತ್ತಾರೆ.

Someshwara, Kotekar, Dakshina Kannada, ಸೋಮೇಶ್ವರ, ಕೋಟೆಕಾರ್, ದಕ್ಷಿಣ ಕನ್ನಡ, ಮಂಗಳೂರು, ದೇವಾಲಯ, ಉಳ್ಳಾಲ, ಬೀಚ್, ಜ್ಯೋತಿರ್ಲಿಂಗ, ಕನ್ನಡರತ್ನ., ದೇವಾಲಯಗಳು, ಟಿ.ಎಂ. ಸತೀಶ್, T.M.Satish, Kannadaratna.com, Temples of Karnataka, ourtemples.in, mangalore, Someshwara, kotekarಸಮುದ್ರ ತಟದ ಪಕ್ಕದಲ್ಲೇ ಸಣ್ಣ ಗುಡ್ಡದ ಮೇಲಿರುವ ಸೋಮನಾಥನ ದೇವಾಲಯಕ್ಕೆ ಹೋಗಲು ಮೆಟ್ಟಿಲುಗಳಿವೆ. ದೇವಾಲಯದ ಪ್ರಧಾನಗರ್ಭಗೃಹದಲ್ಲಿ ಸೋಮನಾಥನ ಲಿಂಗವಿದ್ದು, ಲಿಂಗದ ಎರಡೂ ಮಗ್ಗುಲುಗಳಲ್ಲಿ ಸೋಮನಾಥ ಹಾಗೂ ಅಮ್ಮನವರ ಬಲಿ ಮೂರ್ತಿಗಳಿವೆ. ಪ್ರಾಕಾರದಲ್ಲಿ ಮೂರು ಉಪ ಗುಡಿಗಳಲ್ಲಿ ಸಿದ್ಧಿವಿನಾಯಕ, ಪಾರ್ಥಸಾರಥಿ ಹಾಗೂ ಜನಾರ್ದನನ ಗುಡಿಗಳಿವೆ.  ಮೆಟ್ಟಿಲುಗಳ ಬದಿಯಲ್ಲಿ ರಕ್ತೇಶ್ವರಿಯ ಸನ್ನಿಧಿಯೂ ಇದೆ. ಪೂರ್ವದಿಕ್ಕಿನ ದೀರ್ಘ ಸೋಪಾನದ ಪಂಕ್ತಿಯ ಬಳಿ  ಪಂಚದುರ್ಗಾ ಗುಡಿ ಇದೆ.


ಪ್ರತಿ ವರ್ಷ ಮೀನ ಮಾಸದ ಹುಣ್ಣಿಮೆಯ ಹಿಂದಿನ ಚತುರ್ದಶಿಯಿಂದ ಐದು ದಿನಗಳ ಕಾಲ ಉತ್ಸವ ನಡೆಯುತ್ತದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08242466778 ಸಂಪರ್ಕಿಸಬಹುದು. 

ಮುಖಪುಟ /ನಮ್ಮ ದೇವಾಲಯಗಳು