ಮುಖಪುಟ /ನಮ್ಮ ದೇವಾಲಯಗಳು  

ಕುಮಾರಪಾರ್ಕ್ ಶ್ರೀ ಸುಬ್ರಹ್ಮಣ್ಯ ದೇವಾಲಯ

Kumara park, Subramanya temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ಒಂದಾದ ಕುಮಾರಕೃಪ ಪಶ್ಚಿಮದಲ್ಲಿರುವ ಹಲವು ಪ್ರಸಿದ್ಧ ದೇವಾಲಯಗಳ ಪೈಕಿ ಸುಬ್ರಹ್ಮಣ್ಯಸ್ವಾಮಿ ದೇವಾಲಯವೂ ಒಂದು.

ಸುಬ್ರಹ್ಮಣ್ಯ, ಗಣೇಶ, ಶಿವಪಾರ್ವತಿಯರು ಹಾಗೂ ಗಣದೇವತೆಗಳಿಂದ ಕೂಡಿದ ದ್ರಾವಿಡ ಶೈಲಿಯ 3 ಹಂತದ ಗೋಪುರವಿದೆ.  ನವರಂಗ, ಗರ್ಭಗೃಹವನ್ನು ಒಳಗೊಂಡು ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಶ್ರೀವಳ್ಳಿ -ದೇವಸೇನೆ ಸಮೇತನಾದ ಸುಬ್ರಹ್ಮಣ್ಯಸ್ವಾಮಿಯ ಸುಂದರ ವಿಗ್ರಹವಿದೆ. ಸ್ವಾಮಿಯ ಹಿಂದೆ ಸುಂದರವಾದ ನವಿಲು ನಿಂತಿರುವಂತೆ ಶಿಲ್ಪಿ ವಿಗ್ರಹ ಕಡೆದಿದ್ದಾನೆ.

ದೇವಾಲಯದ ಗರ್ಭಗೃಹದ ಮೇಲ್ಭಾಗದ ಕಲ್ಲಿನ ತೊಲೆಯಲ್ಲಿ ಗಜಲಕ್ಷ್ಮಿಯ ಸುಂದರ ಪ್ರತಿಮೆಯಿದೆ. ಪ್ರಧಾನ ಗರ್ಭಗೃಹದ ಎಡಭಾಗದಲ್ಲಿರುವ ಗರ್ಭಗೃಹದಲ್ಲಿ ಶಂಕ, ಚಕ್ರ, ಗದಾ, ಪದ್ಮಧಾರಿಯಾದ ಶ್ರೀ ಸತ್ಯನಾರಾಯಣ ಸ್ವಾಮಿಯ ವಿಗ್ರಹವಿದೆ.

ಬಲಭಾಗದ ಮತ್ತೊಂದು ಗರ್ಭಗೃಹದಲ್ಲಿ ಮೂಷಿಕವಾಹನನಾದ ಗಣಪತಿಯ ವಿಗ್ರಹವಿದೆ. ಕಲ್ಲಿನಲ್ಲಿ ನಿರ್ಮಿಸಲಾಗಿರುವ ದೇವಾಲಯದ ಆಧಾರ ಸ್ತಂಭಗಲ್ಲಿ ಹಲವು ಕೆತ್ತನೆಗಳಿದ್ದು, ಅದಕ್ಕೆ ಹಿತ್ತಾಳೆ ತಗಡುಗಳಿಂದ ಅಲಂಕರಿಸಲಾಗಿದೆ. ಒಂದು ಕಂಬದಲ್ಲಿ ನಾರದರ, ನಾರಾಯಣ ಮೊದಲಾದ ಉಬ್ಬು ಶಿಲ್ಪಗಳಿದ್ದರೆ, ಮತ್ತೊಂದು ಕಂಬದಲ್ಲಿ ತುಂಬರರು, ನಟರಾಜ, ನಂದಿಯಿದೆ.

ಎತ್ತರವಾದ ಪ್ರವೇಶದ್ವಾರ ಕೂಡ ಕೆತ್ತನೆಗಳಿಂದ ಕೂಡಿದ್ದು, ಅದ್ಕಕೂ ಹಿತ್ತಳೆ ತಗಡುಗಳಿಂದ ಅಲಂಕರಿಸಲಾಗಿದೆ. ಈ ದ್ವಾರಗಳಲ್ಲಿ ಗಂಟೆ, ನಾಗರಾಜ, ಸುಬ್ರಹ್ಮಣ್ಯ ಹಾಗೂ ನಾರಾಯಣನ ಮೂರ್ತಿಗಳಿವೆ. ದೇವಾಲಯದ ಪ್ರಾಕಾರದಲ್ಲಿ ಗಣಪತಿಯ ಮತ್ತೊಂದು ವರದ ವಿಗ್ರಹವಿದೆ. ನವಗ್ರಹಗಳ ಪಕ್ಕದಲ್ಲಿರುವ ಭಿತ್ತಿಗಳಲ್ಲಿ ಎರಡು ಗೂಡುಗಳಿದ್ದು, ಒಂದರಲ್ಲಿ ದಕ್ಷಿಣಾಮೂರ್ತಿಯ ಪ್ರತಿಮೆ ಹಾಗೂ ಮತ್ತೊಂದರಲ್ಲಿ ನಾರಸಿಂಹಸ್ವಾಮಿಯ ವಿಗ್ರಹವಿದೆ.

ಪ್ರಧಾನ ಗರ್ಭಗೃಹದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಯ ಎದುರು ಆನೆಯ ಕೃಷ್ಣ ಶಿಲೆಯ ಪ್ರತಿಮೆಯೂ ಇದೆ. ಇಲ್ಲಿ ನಿತ್ಯ ಅಭಿಷೇಕ, ಪೂಜೆ ನಡೆಯುತ್ತದೆ.

ಮುಖಪುಟ /ನಮ್ಮ ದೇವಾಲಯಗಳು