ಮುಖಪುಟ /ನಮ್ಮ ದೇವಾಲಯಗಳು

ತುರುವೇಕೆರೆಯ ಚನ್ನಿಗರಾಯಸ್ವಾಮಿ ದೇವಾಲಯ

*ಟಿ.ಎಂ.ಸತೀಶ್

Chour temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.annakeswa, turuvekere, ತುರುವೇಕೆರೆ ಚನ್ನಿಗರಾಯ, ಚನ್ನಕೇಶವ, ತೆಂಗಿನನಾಡು ಎಂದೇ ಪ್ರಖ್ಯಾತವಾಗಿರುವ ತುರುವೇಕೆರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬಹಳ ಹಿಂದೆ ಈ ಊರು ಸರ್ವಜ್ಞ ವಿಜಯ ನರಸಿಂಹಪುರಿ ಎಂದು ಕರೆಸಿಕೊಂಡಿತ್ತು. ಮಹಾನ್ ಪಂಡಿತರಿಂದ, ದಾರ್ಶನಿಕರಿಂದ ಕೂಡಿದ ನಾಡಾಗಿತ್ತು. ಚತುರ್ವೇದ ಪಾರಂಗತರು, ಮಹಾಜನರಿಂದ ಕೂಡಿದ ಅಗ್ರಹಾರಗಳು ಇಲ್ಲಿತ್ತು.

ತುರುವೇಕೆರೆಯಲ್ಲಿ ಹೇರಳವಾಗಿ ಗೋ ಸಂಪತ್ತು ಮತ್ತು ಜಲ ಸಂಪತ್ತು ಇತ್ತು ಹೀಗಾಗಿ ಈ ಊರು ನಂತರ ಧೇನುಪುರಿ ಎಂದೂ ಕರೆಸಿಕೊಂಡಿತ್ತು. ತುರು ಎಂದರೆ ಆಡು ಭಾಷೆಯಲ್ಲಿ ಹಸು. ಕಾಲಾನಂತರದಲ್ಲಿ ಈ ಊರು ತುರುವೇಕೆರೆಯಾಯ್ತು ಎಂದು ತಿಳಿದುಬರುತ್ತದೆ.

ಈ ಪವಿತ್ರ ಪುಣ್ಯಭೂಮಿಯಲ್ಲಿ ಹೊಯ್ಸಳರ ಹೊಯ್ಸಳ ದೊರೆ 3ನೇ ನರಸಿಂಹನಿಗೆ ದಂಡನಾಯಕನಾಗಿದ್ದ ಸೋಮಣ್ಣ ನಿರ್ಮಿಸಿದನೆಂದು ಇತಿಹಾಸ ಸಾರುತ್ತದೆ. (ಶಿಲ್ಪಕಲೆಯ ತವರೆಂದೇ ಖ್ಯಾತವಾದ ಸೋಮನಾಥಪುರದ ತ್ರಿಕೂಟಾಚಲವನ್ನು ನಿರ್ಮಿಸಿದ್ದೂ ಈ ಸೋಮಣ್ಣನೇ).

ಸೋಮಣ್ಣ ಕ್ರಿ.ಶ. 1258ರಲ್ಲಿ ತುರುವೇಕೆರೆಯ ಅಗ್ರಹಾರದಲ್ಲಿ ಶ್ರೀಚನ್ನಕೇಶವನಿಗಾಗಿ ಏಕಕೂಟ ದೇವಾಲಯ ನಿರ್ಮಿಸಿದ. ತನ್ನ ಪಿತೃಗಳಿಗೆ ಸದ್ಗತಿ ದೊರಕಲೆಂದು, ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗಲೆಂದು ಇದೇ ಅಗ್ರಹಾರವನ್ನು ಊರಿನಲ್ಲಿ ಪ್ರಸಿದ್ಧರಾಗಿದ್ದ ಹಾಗೂ ವೇದಪಾರಂಗತರಾಗಿದ್ದ ಕೋಟೆ ಶಂಕರದೇವ ಎಂಬ ಯಜುರ್ವೇದ ಅಪಸ್ಥಂಬ ಸೂತ್ರದ ಬ್ರಾಹ್ಮಣನಿಗೆ ಊರಿನ ಮಹಾಜನತೆಯ ಸಮ್ಮುಖದಲ್ಲಿ ದಾನ ಮಾಡಿದ. ಈ ದಾನವನ್ನು ಸ್ವೀಕರಿಸುವಾಗ ಐದು ಜನ ಬ್ರಾಹ್ಮಣರ ಸಹಿಯನ್ನೂ ಪಡೆದ. ಇದು ಇಂದಿಗೂ ಚನ್ನಕೇಶವ ದೇವಾಲಯದ ಭಿತ್ತಿ ಹಾಗೂ ಕಂಬದಲ್ಲಿ ಶಾಸನವಾಗಿ ಇತಿಹಾಸಕ್ಕೆ ಸಾಕ್ಷಿಯಾಗಿದೆ.

Chour temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.annakeswa, turuvekere, ತುರುವೇಕೆರೆ ಚನ್ನಿಗರಾಯ, ಚನ್ನಕೇಶವ, ಸಂಪೂರ್ಣ ಶಿಥಿಲವಾಗಿ ಹಲವು ವರ್ಷಗಳ ಕಾಲ ಪೂಜೆಪುನಸ್ಕಾರಗಳಿಲ್ಲದೆ ಊರ ಜನರಿಂದ ಪಾಪಿ ಚನ್ನಿಗರಾಯ ಎಂದು ಕರೆಸಿಕೊಂಡಿದ್ದ ಈ ದೇವಾಲಯಕ್ಕೆ 1991ರಲ್ಲಿ ಅಕ್ಷರಶಃ ಮುಕ್ತಿ ದೊರಕಿತು. ದಿವಂಗತ ಟಿ.ಆರ್. ಕೃಷ್ಣಮೂರ್ತಿ, ನಾರಾಯಣಶಾಸ್ತ್ರೀ ಅವರ ನೇತೃತ್ವದಲ್ಲಿ ಸ್ಥಳೀಯ ಸುರಭಿ ಸಂಗಮ, ಪುರಾತತ್ವ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಈ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾಯ್ತು.

ಈ ದೇವಾಲಯ ಸುಂದರ ಕಲ್ಲು ಕಟ್ಟಡವಾಗಿದ್ದು, ಪೂರ್ವಾಭಿಮುಖವಾಗಿದೆ. ಭಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿಲ್ಲದಿದ್ದರೂ ಹೊರಭಿತ್ತಿಗಳಲ್ಲಿ ಅರೆಕಂಬ ಹಾಗೂ ಅರೆಗೋಪುರಗಳ ಶಿಲ್ಪ ಇದೆ.

ಪ್ರವೇಶ ದ್ವಾರದಲ್ಲಿ ಜಗತಿ ಇದ್ದು, ಊರಿನ ಪಂಡಿತರು ಇಲ್ಲಿ ಕುಳಿತು ಓಲೆಗರಿಯಲ್ಲಿ ನೂರಾರು ಗ್ರಂಥ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಓಲೆಗರಿಯಲ್ಲಿ ಬರೆಯಲು ತಮ್ಮ ಲೋಹದ ಲೇಖನಿಯನ್ನು ಹರಿತ ಮಾಡಿಕೊಂಡಿರುವುದಕ್ಕೆ ಇಲ್ಲಿರುವ ಕಲ್ಲುಗಳು ಗೆರೆಯಂತೆ ಏಕಪ್ರಕಾರವಾಗಿ ಸವೆದಿರುವುದು ಸಾಕ್ಷಿಯಾಗಿದೆ.

Chour temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.annakeswa, turuvekere, ತುರುವೇಕೆರೆ ಚನ್ನಿಗರಾಯ, ಚನ್ನಕೇಶವ, ಎಲ್ಲ ಹೊಯ್ಸಳ ದೇವಾಲಯಗಳಂತೆ ಇದು ಸಹ ನಕ್ಷತ್ರಾಕಾರದ ಜಗಲಿಯ ಮೇಲಿದೆ.  ಮುಖಮಂಟಪ, ಸುಖನಾಸಿ, ಭುವನೇಶ್ವರಿ, ಜಾಲಂದ್ರ, ಗರ್ಭಗೃಹವಿದೆ. ಇಲ್ಲಿ ಶಂಖ, ಚಕ್ರ, ಗದಾ, ಪದ್ಮಧಾರಿಯಾದ ಚನ್ನಕೇಶವನ ಸುಂದರ ಕೃಷ್ಣಶಿಲೆಯ ವಿಗ್ರಹವಿದೆ.  ದೇವರ ಪ್ರಭಾವಳಿಯಲ್ಲಿ ದಶಾವತಾರದ ಪ್ರಸಂಗಗಳ ಸೂಕ್ಷ್ಮ ಕೆತ್ತನೆಗಳಿವೆ. ಇದನ್ನು ಜಕ್ಕಣಾಚಾರಿ ಕಡೆದನೆಂದೂ ಹೇಳಲಾಗುತ್ತದೆ ಆದರೆ ಇದಕ್ಕೆ ಆಧಾರಗಳಿಲ್ಲ.

ನಾಲ್ಕೂವರೆ ಅಡಿ ಎತ್ತರದ ಚನ್ನಕೇಶವಸ್ವಾಮಿಯ ಪಾದದ ಬಳಿ ಲಕ್ಷ್ಮಿಯ ಪುಟ್ಟ ವಿಗ್ರಹವಿದೆ ಈ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತದೆ. ನವರಾತ್ರಿಯ ವೇಳೆ 10 ದಿನಗಳ ಕಾಲ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜೆ, ಉತ್ಸವಗಳು ಜರುಗುತ್ತವೆ. ಶ್ರಾವಣ, ಕಾರ್ತೀಕ ಮಾಸಗಳಲ್ಲೂ ವಿಶೇಷ ಪೂಜಾ ವಿಧಿಗಳು ಜರುಗುತ್ತವೆ. ಈ ದೇವಾಲಯಕ್ಕೆ ಬರುವ ಭಕ್ತರಿಗೆ, ಪ್ರವಾಸಿಗರಿಗೆ ಸ್ಥಳ ಪುರಾಣ, ದೇವಾಲಯದ ಮಾಹಿತಿ ದೊರಕಲೆಂದು ಟಿ.ನಟರಾಜ ಪಂಡಿತ್ ಅವರು, ದೊಡ್ಡ ಫಲಕವನ್ನೇ ಇಲ್ಲಿ ಹಾಕಿಸಿದ್ದಾರೆ. ಬ್ರಿಟನ್ನಿನ ಎಸ್.ಎಸ್.ಎಂ. ಪೊಕೆಮಾ ಎಂಬ ಇತಿಹಾಸತಜ್ಞರು ತುರುವೇಕೆರೆಗೆ ಆಗಮಿಸಿ, ಹೊಯ್ಸಳ ವಾಸ್ತು ಶಿಲ್ಪದ ಬಗ್ಗೆ ಅಧ್ಯಯನ ನಡೆಸಿದ್ದಾರೆ ಎಂದೂ ನಟರಾಜ ಪಂಡಿತ್ ತಿಳಿಸುತ್ತಾರೆ.

ಮಾರ್ಗ : ಬೆಂಗಳೂರಿನಿಂದ ತುರುವೇಕೆರೆಗೆ ನೇರ ಬಸ್ ಸೌಕರ್ಯವಿದೆ. ಕುಣಿಗಲ್, ಯಡಿಯೂರು, ಮಾಯಸಂದ್ರ ದಾಟಿದರೆ ತುರುವೇಕೆರೆ ಸಿಗುತ್ತದೆ. ಬೆಂಗಳೂರಿನಿಂದ ತುರುವೇಕೆರೆಗೆ 120 ಕಿಲೋ ಮೀಟರ್. ರಾತ್ರಿ ಉಳಿಯಲು ಹೊಟೆಲ್ ಗಳಿವೆ. 

ಮುಖಪುಟ /ನಮ್ಮ ದೇವಾಲಯಗಳು