ಮುಖಪುಟ /ನಮ್ಮದೇವಾಲಯಗಳು  

ವೆಲ್ಲೂರು ಕೋಟೆಯ ಜಲಕಂಠೇಶ್ವರ ದೇವಾಲಯ

ವಿಜಯನಗರದರಸರ ಕಾಲದ ಪುರಾತನ ಶಿವಾಲಯ

ಟಿ.ಎಂ.ಸತೀಶ್

 Vellur Jalakanteswara temple, Vellur, Tamil nadu, vijayanagara regim, our temples, T.M.Satish,ತಮಿಳುನಾಡಿನಲ್ಲಿ ನಿರ್ಮಾಣವಾಗಿರುವ ಸುವರ್ಣಮಯ ಲಕ್ಷ್ಮೀ ದೇವಾಲಯದಿಂದ ಖ್ಯಾತವಾದ ವೆಲ್ಲೂರು ಪುರಾತನ ನಗರಿ. ಇಲ್ಲಿ ವಿಜಯನಗರದ ಅರಸು ಸದಾಶಿವದೇವರಾಯರ ಕಾಲದಲ್ಲಿ 1566ರಲ್ಲಿ ನಿರ್ಮಾಣವಾದ ಗಟ್ಟಿಮುಟ್ಟಾದ ಕಲ್ಲಿನ ಕೋಟೆಯಿದೆ. ಈ ಕೋಟೆಯೊಳಗೆ ಕೋಟೆಯಂತೆಯೇ ಇರುವ ಪುರಾತನವಾದ ಜಲಕಂಠೇಶ್ವರ ದೇವಾಲಯವೂ ಇದೆ.

ವಿಜಯನಗರದ ಅರಸರ ಕಾಲದಲ್ಲಿ ಮಾಂಡಲೀಕನಾಗಿದ್ದ ವೀರಪ್ಪನಾಯಕನ ಪುತ್ರ ಚಿನ್ನಬೊಮ್ಮಿನಾಯಕ ಅಥವಾ ವೆಲ್ಲೂರಿ ಬೊಮ್ಮಿ ನೃಪತಿ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ ಎಂದು ಇತಿಹಾಸದಿಂದ ಸಾರುತ್ತದೆ. ಇಲ್ಲಿ ಚಿನ್ನ ಬೊಮ್ಮಿನಾಯಕ ಕೋಟೆ ಕಟ್ಟುವ ಮೊದಲೇ ಶಿವಲಿಂಗವಿತ್ತು, ಅದಕ್ಕೆ ದೇವಾಲಯವಿತ್ತು ಎಂದು ತಿಳಿದುಬರುತ್ತದೆ. ಸ್ಥಳ ಪುರಾಣದ ರೀತ್ಯ ಇಲ್ಲಿ ನಿಂತ ನೀರಿನ ಮಧ್ಯದಲ್ಲಿ ಶಿವಲಿಂಗವಿತ್ತು ಹಾಗೂ ಸುತ್ತಲೂ ಹುತ್ತ ಬೆಳೆದಿತ್ತು. ಒಮ್ಮೆ ನಾಯಕರ ಕನಸಲ್ಲಿ ಬಂದ ಶಿವ ಇಲ್ಲಿ ದೇವಾಲಯ ನಿರ್ಮಿಸುವಂತೆ ಸೂಚಿಸಿದನೆಂದೂ, ನಂತರ ಬೊಮ್ಮಿ ನಾಯಕ ದೇಗುಲ ನಿರ್ಮಿಸಿದನೆಂದೂ, ಜಲದ ಮಧ್ಯದಲ್ಲಿದ್ದ ಲಿಂಗಕ್ಕೆ ಜಲಕಂಠೇಶ್ವರ ಎಂದು ಕರೆದನೆಂದೂ ಹೇಳಲಾಗುತ್ತದೆ.

ಇಂದಿಗೂ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಇದೇ ಜಲಕಂಠೇಶ್ವರನ ಲಿಂಗವಿದೆ. ಅಭಿಷೇಕ  Vellur Jalakanteswara temple, Vellur, Tamil nadu, vijayanagara regim, our temples, T.M.Satish,ಪ್ರಿಯನಾದ ಈ ಶಿವನಿಗೆ ದೇವಾಲಯದ ಪ್ರಾಕರದಲ್ಲಿಯೇ ಇರುವ ಗಂಗಾಗೌರಿ ತೀರ್ಥದ ನೀರಿನಿಂದ ನಿತ್ಯಾಭಿಷೇಕ ಜರುಗುತ್ತದೆ.

ಚೆನ್ನೈನಿಂದ 137 ಕಿ.ಮೀ. ದೂರದಲ್ಲಿರುವ ವೆಲ್ಲೂರಿನಲ್ಲಿರುವ ಈ ದೇವಾಲಯವನ್ನು ವಿಜಯನಗರ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಭವ್ಯವಾದ ಗೋಪುರಗಳು, ಪ್ರಾಕಾರ,  ಮಹಾ ಮಂಟಪ, ಮುಖಮಂಟಪ, ಪ್ರದಕ್ಷಿಣಾ ಪಥ, ಅಂತರಾಳ, ಗರ್ಭಗೃಹವನ್ನು ದೇವಾಲಯ ಒಳಗೊಂಡಿದೆ. ಕಲ್ಲಿನಿಂದ ನಿರ್ಮಿಸಿರುವ ಪ್ರಧಾನ ದ್ವಾರದ ಮೇಲೆ ಏಳಂತಸ್ತಿನ ಭವ್ಯ ಗೋಪುರ ಹೊಂದಿದ್ದು, ದ್ವಾರಪಾಲಕರ ವಿಗ್ರಹಗಳನ್ನು ಒಳಗೊಂಡಿದೆ, ಮೇಲ್ಭಾಗದಲ್ಲಿ ಏಳು ಕಳಶಗಳಿವೆ. ಕಡು ಕಣ ಶಿಲೆಯ ಬಾಗಿಲ ವಾಡದ ಸುತ್ತ ಹಂಸ, ಆನೆ, ನಂದಿ,  ಅರೆ ಗೋಪುರ, ದೇವತೆಗಳೇ ಮೊದಲಾದ ಸುಂದರ ಉಬ್ಬು ಶಿಲ್ಪಗಳಿವೆ.

ಈ ದ್ವಾರದಿಂದ ಒಳಪ್ರವೇಶಿಸಿದರೆ ಮತ್ತೊಂದು ಸುಂದರ ಗೋಪುರವೂ ಇದೆ. ನಾಲ್ಕು ಅಂತಸ್ತಿನ ಈ ಗೋಪುರದ ಸುತ್ತಲೂ ಮತ್ತೊಂದು ಸುತ್ತಿನ ಕೋಟೆಯಂತಿದೆ. ಗೋಪುರದ ಮೇಲೆ ಪಂಚಕಳಶವಿದೆ. ಈ  Vellur Jalakanteswara temple, Vellur, Tamil nadu, vijayanagara regim, our temples, T.M.Satish,ದ್ವಾರದ ಮೂಲಕ ಒಳ ಪ್ರವೇಶಿಸಿದರೆ, ವಾಯವ್ಯ ಮೂಲೆಯಲ್ಲಿ ಅಖಿಲಾಂಡೇಶ್ವರಿ ಅಮ್ಮನವರ ಗುಡಿ ಇದೆ, ನೈಋತ್ಯದಲ್ಲಿ ಕಲ್ಯಾಣಮಂಟಪವಿದೆ. ದೇವಾಲಯದ ಗೋಪುರದ ಕೆಳಗಿರುವ ದ್ವಾರಬಂಧ, ಮುಖಮಂಟಪ, ಭುವನೇಶ್ವರಿ, ಮಹಾಮಂಪಟಗಳ ಕಂಬಗಳ ಕೆತ್ತನೆ ಅದ್ಭುತವಾಗಿದೆ. ಕಂಬಗಳಲ್ಲಿ ಹೊರಚಾಚಿದ ಯಾಳಿಗಳ ಕೆತ್ತನೆ, ಕುದುರೆ ಸವಾರರ ಶಿಲ್ಪಗಳು ಮನಮೋಹಕವಾಗಿದೆ.  ವಿರುದ್ಧದಿಕ್ಕಿನಲ್ಲಿ ನಿಂತ ಆನೆ ಮತ್ತು ಹಸುವಿನ ಚಿತ್ರವೊಂದು ದೇವಾಲಯದಲ್ಲಿದ್ದು, ಇದಕ್ಕೆ ಒಂದೇ ಮುಖವಿದ್ದರೂ ಆನೆ ಹಾಗೂ ಹಸುವನ್ನು ಕೆತ್ತಿರುವುದು ಶಿಲ್ಪಿಯ ಕೈಚಳಕಕ್ಕೆ ಸಾಕ್ಷಿಯಾಗಿದೆ.

ಈ ದೇವಾಲಯಕ್ಕೆ ವೆಲ್ಲೂರು ಸುತ್ತಮುತ್ತಲ ಏಳು ಗ್ರಾಮಗಳನ್ನು ದತ್ತಿ ನೀಡಲಾಗಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ದೇವಾಲಯವನ್ನು ಕೇಂದ್ರ ಪ್ರಾಚ್ಯವಸ್ತು ಇಲಾಖೆ ಈ ದೇವಾಲಯವನ್ನು ಸಂರಕ್ಷಿಸಿದೆ.

ಮುಖಪುಟ /ನಮ್ಮದೇವಾಲಯಗಳು