ಮುಖಪುಟ /ನಮ್ಮದೇವಾಲಯಗಳು

ಶ್ರೀ ವಿದುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ

Viduraswatha, Narayana, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿರುವ ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಸ್ಥಳ ವಿದುರಾಶ್ವತ್ಥ. ಗೌರಿಬಿದನೂರಿನ ಉತ್ತರಕ್ಕೆ ಸುಮಾರು 6 ಕಿಮೀ ದೂರದಲ್ಲಿರುವ ಈ ಊರಿನ ಬಳಿ ಇರುವ ದೊಡ್ಡ ಕುರುಗೋಡಿನಲ್ಲಿ ದ್ವಾಪರಯುಗದ ಕೊನೆಯ ಚರಣದಲ್ಲಿ ಮಹಾಭಾರತ ಬರೆದ ವ್ಯಾಸ ಮಹರ್ಷಿಗಳ ಪುತ್ರ ವಿದುರರೇ ನೆಟ್ಟು ಬೆಳೆಸಿದನೆಂದು ಹೇಳಲಾಗುವ ಬೃಹದಾಕಾರದ ಅಶ್ವತ್ಥ ಮರವಿದೆ. ಹೀಗಾಗೇ ಈ ಊರಿಗೆ ವಿದುರಾಶ್ವತ್ಥ ಎಂಬ ಹೆಸರು ಬಂದಿದೆ.

ಮೈತ್ರೇಯ ಮಹಾಮುನಿಗಳು ನೆಟ್ಟ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿಹ ಅಶ್ವತ್ಥಗಿಡವನ್ನು

ಮೂಲತೋ ಬ್ರಹ್ಮರೂಪಾಯ
ಮಧ್ಯತೋ ವಿಷ್ಣು ರೂಪಿಣಿ,
ಅಗ್ರತಃ ಶಿವರೂಪಾಯ ವೃಕ್ಷ ರಾಜಾಯತೇ ನಮಃ ಎಂದು ವಿದುರರು ಪೂಜಿಸದರು ಎಂದೂ ಹೇಳುತ್ತಾರೆ. ಉತ್ತರ ಪಿನಾಕಿನಿ ನದಿಯ ಎಡದಂಡೆಯ ಮೇಲಿರುವ ಈ ವೃಕ್ಷ ಪೂಜನೀಯವಾಗಿದ್ದು, ಇಲ್ಲಿಗೆ ಬರುವ ಭಕ್ತರು ಈ ವೃಕ್ಷವನ್ನು ಪೂಜಿಸದೆ ಹೋಗುವುದೇ ಇಲ್ಲ. ಮಕ್ಕಳಾಗದವರು, ನಾಗದೋಷ ಇರುವವರು ಈ ಮರದ ಕೆಳಗೆ ಪ್ರತಿಷ್ಠಾಪಿಸಿರುವ ಸಾವಿರಾರು ನಾಗರಕಲ್ಲುಗಳಿವೆ. ಆಂಧ್ರಪ್ರದೇಶ ಹಾಗೂ ಕರ್ನಾಟಕದ ನೂರಾರು ಭಕ್ತರು ನಿತ್ಯ ಇಲ್ಲಿಗೆ ಆಗಮಿಸಿ ವೃಕ್ಷವನ್ನು ಹಾಗೂ ಇಲ್ಲಿರುವ ದೇವರುಗಳನ್ನು ಪೂಜಿಸುತ್ತಾರೆ.

ಈ ವೃಕ್ಷದ ಸುತ್ತ ಪ್ರಾಕರವಿದ್ದು, ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮೊದಲು ಅಭಿಷ್ಟ ಸಿದ್ಧ ಗಣಪತಿ ದರ್ಶನವಾಗುತ್ತದೆ. ಅಮೃತಶಿಲೆಯಿಂದ ಕೆತ್ತಲಾಗಿರುವ ಬಲಮುರಿ ಗಣಪನ ಮೂರ್ತಿ ಸುಂದರವಾಗಿದೆ. ಪಕ್ಕದಲ್ಲೇ ಇರುವ ಅಶ್ವತ್ಥನಾರಾಯಣ ಗುಡಿ ಪ್ರಧಾನವಾದದ್ದು. ಇಲ್ಲಿ ಭವಾನಿಶಂಕರ, ಶ್ರೀರಾಮ, ವೀರಾಂಜುನೇಯಸ್ವಾಮಿ, ಶ್ರೀದೇವಿ, ಭೂದೇವಿ ದೇವಾಲಯಗಳೂ ಇವೆ. ದೇವಾಲಯಗಳಿವೆ. ಈ ದೇವಸ್ಥಾನದ ಹಿಂದಿರುವ ತೋಟದಲ್ಲಿ ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ದೊಡ್ಡ ಜಾತ್ರೆ ನೆರೆಯುತ್ತದೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಊರು ಪ್ರಮುಖ ಪಾತ್ರ ವಹಿಸಿತ್ತು. ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗುಂಡು ಹಾರಿಸಿ 10 ಮಂದಿ ದೇಶಭಕ್ತರನ್ನು ಕೊಂದಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದವರ ಸ್ಮರಣಾರ್ಥ 1959ರಲ್ಲಿ ಇಲ್ಲಿ ಸರ್ವೋದಯ ಮೆಮೋರಿಯಲ್ ಪ್ರೌಢಶಾಲೆಯನ್ನು ಸ್ಥಾಪಿಸಲಾಯಿತು. 1962ರಲ್ಲಿ ಸತ್ಯಾಗ್ರಹಿಗಳ ನೆನಪಿಗಾಗಿ ಸ್ಮಾರಕಸ್ತಂಭವೊಂದನ್ನು ನಿರ್ಮಿಸಲಾಗಿದೆ.

ಸಂಪರ್ಕ : ಬೆಂಗಳೂರು ಹೈದ್ರಾಬಾದ್ ಹೆದ್ದಾರಿಯಲ್ಲಿ ಗೌರಬಿದನೂರು ಹಾಗೂ ಹಿಂದೂಪುರದ ನಡುವೆ ಇರುವ ದಕ್ಷಿ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ನೇರ ಬಸ್ ಸೌಕರ್ಯವಿದೆ. 

ಮುಖಪುಟ /ನಮ್ಮ ದೇವಾಲಯಗಳು