ಸುಂದರ ದೇವಾಲಯಗಳ ನೆಲೆವೀಡು ವಿಘ್ನಸಂತೆ
ಇಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದ ಶಿಖರದಲ್ಲಿರುವ ನಾಟ್ಯಗಣಪ ಹಳೆಬೀಡಿನ ಪ್ರವೇಶ ದ್ವಾರದ ಬಲಭಾಗದಲ್ಲಿರುವ ನಾಟ್ಯ ಗಣಪನನ್ನೇ ಹೋಲುತ್ತದೆ. ದೇವಾಲಯದ ಮುಂಭಾಗದಲ್ಲಿರುವ ಆನೆಗಳ ವಿಗ್ರಹ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳ ಆವರಣದಲ್ಲಿರುವ ಆನೆಗಳ ಶಿಲ್ಪವನ್ನೇ ಹೋಲುತ್ತದೆ.
ಈ ಗ್ರಾಮಕ್ಕೆ ಹಿಂದೆ ಇಗನಸಂತೆ ಎಂದು ಕರೆಯುತ್ತಿದ್ದರಂತೆ. ಕಾಲಾನುಕ್ರಮದಲ್ಲಿ ಇದು ವಿಘ್ನಸಂತೆಯಾಗಿದೆ. ಹೊಯ್ಸಳರ ಕಾಲದಲ್ಲಿ ಇದೊಂದು ಪ್ರಮುಖ ಸ್ಥಳವಾಗಿತ್ತು ಎಂಬುದನ್ನು ದೇವಾಲಯದ ಎಡಭಾಗದಲ್ಲಿರುವ ಶಾಸನಗಳು ಸಾರುತ್ತವೆ. ಹೊಯ್ಸಳ ಮೂರನೆಯ ನರಸಿಂಹನ ದಂಡನಾಯಕರೂ ಮಲ್ಲಿದೇವದಂಡನಾಯ ಕನ ಮಕ್ಕಳೂ ಆದ ಅಪ್ಪಯ್ಯ, ಗೋಪಾಲ ಮತ್ತು ಮಾಧವ ಎಂಬವರು ಈ ದೇವಾಲಯವನ್ನು 1286ರಲ್ಲಿ ಕಟ್ಟಿಸಿದರೆಂದು ಶಾಸನ ತಿಳಿಸುತ್ತದೆ.
ವಿಶಿಷ್ಟ ವಿನ್ಯಾಸ ಮತ್ತು
ಸೂಕ್ಷ್ಮ ಶಿಲ್ಪಾಲಂಕರಣಗಳಿಂದ ಕೂಡಿದ ಹೊಯ್ಸಳ ಶೈಲಿಯಲ್ಲೇ ಪೂರ್ಣವಾಗಿ
ರಚಿತವಾಗಿರುವ
ಈ ಗ್ರಾಮದಲ್ಲಿ ಹರಿಯುವ ಹಳ್ಳದ ಪಕ್ಕದಲ್ಲಿ ಬಾಲಲಿಂಗೇಶ್ವರ ದೇವಾಲಯವಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಈಗ ನಡೆಯುತ್ತಿದೆ. ಗ್ರಾಮದ ಉತ್ತರದಲ್ಲಿರುವ ಬಯಲಲ್ಲಿ ನೂತನವಾಗಿ ಕಟ್ಟಿದ ಬನಶಂಕರಿ ದೇವಾಲಯವಿದೆ. ಗರ್ಭಗೃಹ ಮತ್ತು ಸುಕನಾಸಿ ಮಾತ್ರವಿರುವ ಈ ದೇವಾಲಯದಲ್ಲಿ ಸುಖಾಸನಾರೂಢವಾದ ಬಹುಶಃ ಹೊಯ್ಸಳ ಕಾಲಕ್ಕೆ ಸೇರಿದ ದೇವಿಯ ವಿಗ್ರಹವಿದೆ. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯಿಂದ ಜಾತ್ರೆಯೂ ನಡೆಯುತ್ತದೆ.
| |||