ಮುಖಪುಟ /ನಮ್ಮದೇವಾಲಯಗಳು   

ವಿಜಯನಗರದ ಮಾರುತಿ ಮಂದಿರ

*ಟಿ.ಎಂ.ಸತೀಶ್

our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಕನ್ನಡಿಗರಿಗೆ ಹನುಮನ ಕಂಡರೆ ಬಲು ಪ್ರೀತಿ. ಹನುಮನಿಲ್ಲದ ಊರೇ ಇಲ್ಲ ಎಂದರೆ ತಪ್ಪಲ್ಲ. ಇದಕ್ಕೆ ಕಾರಣ ಹನುಮ ಕನ್ನಡಿಗ. ಕೇಳಿಲ್ಲವೇ ಭೂ ಕೈಲಾಸದ ಈ ಹಾಡು... ಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲ ಪುಂಗವ ಹನುಮ...

ಹನುಮ ಹುಟ್ಟಿದ್ದು, ಹಂಪೆ, ಆನೆಗೊಂದಿ ಬಳಿಯ ಕಿಷ್ಕಿಂಧಾ ಪಟ್ಟಣದಲ್ಲಿ ಎಂದು ಪುರಾಣಗಳು ಹೇಳುತ್ತವೆ. ಬೆಂಗಳೂರಿನಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಮಾರುತಿ ಮಂದಿರಗಳಿವೆ ಎಂದು ಅಂದಾಜು. ಇವುಗಳ ಪೈಕಿ ವಿಜಯನಗರದ ಮಾರುತಿ ಮಂದಿರ ಪ್ರಮುಖವಾದದ್ದು. ಈ ಪ್ರದೇಶದ ಹಳಬರು ಇಂದಿಗೂ ಈ ದೇವಾಲಯವನ್ನು ಕೋತಿ ಬಂಡೆ ಎಂದೇ ಕರೆಯುತ್ತಾರೆ. ೬೦ ದಶಕದ ಮಧ್ಯಭಾಗದಲ್ಲಿ ಇಲ್ಲಿ ಊರು ಅಷ್ಟು ಬೆಳೆದಿರಲಿಲ್ಲ. ಮಾರೇನಹಳ್ಳಿ, ಹೊಸಳ್ಳಿ, ತಮ್ಮೇನಹಳ್ಳಿ, ದಾಸರಹಳ್ಳಿ ಎಂದ ಗ್ರಾಮಗಳು ಸುತ್ತಲೂ ಇದ್ದವು. ಇಲ್ಲಿದ್ದ ಒಂದು ಬಂಡೆಯ ಮೇಲೆ ನಿತ್ಯ ಕೋತಿಯೊಂದು ಬಂದು ಕುಳಿತುಕೊಳ್ಳುತ್ತಿತ್ತಂತೆ. ಹಳ್ಳಿಗರು, ಹನುಮ ಸ್ವರೂಪಿಯೆಂದೇ ತಿಳಿದ ಕೋತಿಗಳಿಗೆ ಹಣ್ಣು, ಕಡಲೆ ಕಾಯಿ ನೀಡುತ್ತಿದ್ದರು. ಇದು ಮೊದಲಿಗೆ ಆಕರ್ಷಣೆಯ ನೆಲೆಯಾಗಿ ನಂತರ ನಂಬಿಕೆಯ ಕೇಂದ್ರವಾಯ್ತು. ಕೋತಿ our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಕುಳಿತುಕೊಳ್ಳುತ್ತಿದ್ದ ಕೋಡುಗಲ್ಲಿಗೆ ಕೆಲವರು ಪೂಜೆ ಮಾಡಿ, ತಮ್ಮ ಕಷ್ಟ ಹೇಳಿಕೊಳ್ಳುತ್ತಿದ್ದರು. ಹೀಗೆ ಬಂಡೆ ಪೂಜಿಸಿದ ಮಂದಿಯ ಸಂಕಷ್ಟ ಪರಿಹಾರವಾಗುತ್ತಿತ್ತು. ಇದರ ಖ್ಯಾತಿ ಹಳ್ಳಿಗಳಲ್ಲಿ ಹಬ್ಬಿತು. ಇಲ್ಲಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಿತು. ಇಲ್ಲಿದ್ದ ಕೋತಿ ಸಿಡಿಲು ಬಡಿದು ಸತ್ತಾಗ ಅದಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿ ಪಕ್ಕದಲ್ಲೇ ಸಮಾಧಿ ಕಟ್ಟಿಸಿದರು.

ಕೋತಿ ಕುಳಿತುಕೊಳ್ಳುತ್ತಿದ್ದ ಬಂಡೆಯ ಮೇಲೆ ಮಾರುತಿ, ಗಣಪತಿ ತೈಲ ವರ್ಣಚಿತ್ರ ಬರೆಯಲಾಯಿತು. ಪುಟ್ಟ ಗುಡಿಯ ನಿರ್ಮಾಣವಾಯಿತು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು, ೨೦-೦೪-೧೯೭೫ರಲ್ಲಿ ಈ ದೇವಾಲಯವನ್ನು ಅನಾವರಣ ಮಾಡಿದರು.

೧೯೮೩ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಿ ಬಸವಣ್ಣ ಅವರಿಂದ ಈ ಕಲ್ಲಿನಲ್ಲಿ ೧೩ ಅಡಿ ಎತ್ತರದ ಹನುಮನ ಮೂರ್ತಿಯನ್ನು our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಮಾಡಿಸಲಾಯಿತು. ನಂತರದ ವರ್ಷಗಳಲ್ಲಿ ಬಲ ಭಾಗದಲ್ಲಿ ಗಣಪತಿ ಮತ್ತು ಎಡ ಭಾಗದಲ್ಲಿ ಸೀತಾ, ರಾಮ ಲಕ್ಷ್ಮಣರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ೯೪ರಲ್ಲಿ ಇಲ್ಲಿ ಗೋಪುರ ನಿರ್ಮಾಣ ಕಾರ್ಯ ನಡೆಯಿತು. ಈಗ ಇಲ್ಲಿ ೫ಸಾವಿರ ಚದರಡಿಯ ವಿಶಾಲ ಜಾಗದಲ್ಲಿ ಭವ್ಯ ದೇವಾಲಯವಿದೆ. ಪ್ರಾಕಾರದಲ್ಲಿ ನವಗ್ರಹ ದೇವಾಲಯ ಹಾಗೂ ಅಶ್ವತ್ಥವೃಕ್ಷವಿದೆ. ಕೆಳಗೆ ನಾಗದೇವರುಗಳ ಪ್ರತಿಮೆಗಳಿವೆ.

ದೇವಾಲಯದ ಆಡಳಿತ ಮಂಡಳಿ ದೇವಾಲಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಎಲ್ಲ ಹಬ್ಬ ಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರೀರಾಮನವಮಿ ಹಾಗೂ ಹನುಮ ಜಯಂತಿಯಂದು ವಿಶೇಷ ಪೂಜೆ ಅಲಂಕಾರಗಳು ನೆರವೇರುತ್ತವೆ.

ಪ್ರತಿ ಸೋಮವಾರ ದೇವರುಗಳಿಗೆ ಬೆಣ್ಣೆ ಅಲಂಕಾರ ಮಾಡಲಾಗುತ್ತದೆ. ವಿಳ್ಳೆದೆಲೆ ಅಲಂಕಾರ, ವಡೆಸರದ ಅಲಂಕಾರಗಳೂ ನಡೆಯುತ್ತವೆ. ದೇವಾಲಯದ ನಿರ್ವಹಣೆ ಮಾಡುತ್ತಿರುವ ಮಾರುತಿ ಭಕ್ತ ಮಂಡಳಿ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಗುತ್ತದೆ. ಈ ವರ್ಷ ಒಂದೂವರೆ ಲಕ್ಷ ರೂಪಾಯಿ ಮೊತ್ತದ ನೋಟ್ ಪುಸ್ತಕ ವಿತರಿಸಿದ್ದಾಗಿ ಕಾರ್ಯದರ್ಶಿ ರಾಮಚಂದ್ರ ತಿಳಿಸುತ್ತಾರೆ.

ಪ್ರತಿ ನಿತ್ಯ ಇಲ್ಲಿ ಬೆಳಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತದೆ. ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಹನುಮ ಕೂಡ ಬೇಡಿ ಬರುವ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾನೆ. 

ಮುಖಪುಟ; /ನಮ್ಮದೇವಾಲಯಗಳು