ಮುಖಪುಟ /ನಮ್ಮದೇವಾಲಯಗಳು   

ವಿಜಯನಗರದ ಕೋದಂಡರಾಮ ದೇವಾಲಯ

*ಟಿ.ಎಂ.ಸತೀಶ್

our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.೧೯೬೦-೭೦ರ ದಶಕದಲ್ಲಿ ಬೆಂಗಳೂರು ನಗರ ವಿಸ್ತರಣೆಯಾಗುತ್ತಿದ್ದ ಕಾಲದಲ್ಲಿ ಬೆಂಗಳೂರು ದಕ್ಷಿಣದಲ್ಲಿ ಹುಟ್ಟಿದ ಹೊಸ ಬಡಾವಣೆಯೇ ಹೊಸಹಳ್ಳಿ ಅಥವಾ ಹೊಸಳ್ಳಿ. ಈಗ ಈ ಬಡವಾವಣೆ ವಿಜಯನಗರವಾಗಿದೆ. ಶ್ರೀಮಂತರ ಬಡಾವಣೆಯಾಗಿ ಮಾರ್ಪಟ್ಟಿದೆ.

ಇಲ್ಲಿ ೭೦ರ ದಶಕದಲ್ಲೇ ಪುಟ್ಟದೊಂದು ಗಣಪನ ಗುಡಿಯಿತ್ತು. ಭಕ್ತರು ಇಲ್ಲಿ ಭಜನೆ ಮಾಡುತ್ತಿದ್ದರು. ಸನಾತನ ಭಕ್ತ ಮಂಡಳಿ ಎಂದ ಸಂಸ್ಥೆ ಸ್ಥಾಪಿಸಿದರು. ಸಂಸ್ಥೆಯ ವತಿಯಿಂದ ಭಜನೆ ಮಾಡಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ಸುಂದರ ದೇವಾಲಯ ನಿರ್ಮಿಸಿದರು. ಅದುವೇ  ಶ್ರೀಕೋದಂಡರಾಮಸ್ವಾಮಿ ದೇವಸ್ಥಾನ.

ವಿಜಯನಗರ ಬಸ್ ನಿಲ್ದಾಣದ ಎದುರು, ಜನನಿಬಿಡ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿರುವ ಈ ದೇವಾಲಯಕ್ಕೆ ಭವ್ಯವಾದ ರಾಜಗೋಪುರವಿದೆ. ವಿಜಯನಗರದರಸರ ಶೈಲಿಯ ಸುಂದರ ಗೋಪುರದ ಮೇಲೆ ಹಲವು ದೇವಾನು ದೇವತೆಗಳ, ಗಣಗಳ ಶಿಲ್ಪಗಳಿವೆ.

our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ದೇವಾಲಯದ ಪ್ರವೇಶದಲ್ಲೇ ಗರುಡಗಂಬವಿದ್ದು, ಅದರಲ್ಲಿ ಶಂಕ, ಚಕ್ರ ಹಾಗೂ ಗಣಪನ ಉಬ್ಬುಶಿಲ್ಪವಿದೆ. ಅದರ ಪಕ್ಕದಲ್ಲಿ ಶ್ರೀರಾಮನ ಭಂಟ ಅಂಜಲೀಬದ್ಧ ಮಾರುತಿಯ ಮೂರ್ತಿಯಿದೆ.

ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಹನುಮದ್ ಸಮೇತ ಸೀತಾರಾಮಲಕ್ಷ್ಮಣರ ಮೂರ್ತಿಗಳಿವೆ. ಶ್ರೀರಾಮ ಇಲ್ಲಿ ಬಿಲ್ಲು ಹಿಡಿದಿರುವ ಕಾರಣ ಕೋದಂಡರಾಮಸ್ವಾಮಿ ಎಂದು ಕರೆಸಿಕೊಂಡಿದ್ದಾನೆ.

ಈ ಗರ್ಭಗೃಹದ ಬಲ ಭಾಗದಲ್ಲಿ ಎತ್ತರದ ಪೀಠದ ಮೇಲೆ ವಿಘ್ನನಿವಾರಕ ಗಣೇಶನ ಪುಟ್ಟ ಸುಂದರ ಮೂರ್ತಿಯಿದೆ. ಎಡ ಭಾಗದ ಗರ್ಭಗೃಹದಲ್ಲಿ ಸರ್ವಾಲಂಕಾರ ಭೂಷಿತನಾದ ಶ್ರೀ ಕೈಲಾಸೇಶ್ವರಸ್ವಾಮಿಯ ಲಿಂಗವಿದೆ. ಶಿವನ ಎದುರು ಕಲಾತ್ಮಕ ಕೆತ್ತನೆಯಿಂದ ಕೂಡಿದ ನಂದಿಯ ವಿಗ್ರಹವಿದೆ.

ದೇವಾಲಯದ ಒಂದು ಆವರಣದ ಹೊರಗೆ ಇರುವ ಮತ್ತೊಂದು ಗುಡಿಯಲ್ಲಿ ಶ್ರೀಸುಬ್ರಹ್ಮಣ್ಯ ಸ್ವಾಮಿ ಮೂರ್ತಿಯನ್ನು our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಪ್ರತಿಷ್ಠಾಪಿಸಲಾಗಿದೆ.

೮೦ರ ದಶಕದ ಆದಿ ಭಾಗದಲ್ಲಿ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ರಾಮನವವಿ, ಹನುಮಜಯಂತಿ, ಶಿವರಾತ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಗಣಪ, ಈಶ್ವರ ಹಾಗೂ ಕೋದಂಡರಾಮಸ್ವಾಮಿಗೆ ವರ್ಷದಲ್ಲಿ ಒಮ್ಮೆ ರಥೋತ್ಸವ ನಡೆದರೆ, ಇಲ್ಲಿರುವ ಸುಬ್ರಹ್ಮಣ್ಯದೇವರಿಗೆ ಪ್ರತ್ಯೇಕವಾಗಿ ರಥೋತ್ಸವ ನಡೆಯುತ್ತದೆ.

ಪ್ರತಿ ತಿಂಗಳು ಶಿವನಿಗೆ ಎರಡು ಪ್ರದೋಷ ನಡೆದರೆ, ಎರಡೂ ಷಷ್ಟಿಯಲ್ಲಿ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಜರುಗುತ್ತದೆ, ವಿಘ್ನೇಶ್ವರನಿಗೆ ಪೂರ್ಣಿಮೆಯ ನಂತರದ ಚೌತಿಯಂದು ಸಂಕಷ್ಟಹರ ಗಣಪತಿ ಪೂಜೆ ನಡೆದರೆ, ಶ್ರೀರಾಮನಿಗಾಗಿ ಪ್ರತಿ ತಿಂಗಳೂ ರಾಮತಾರಕ ಹೋಮ ನಡೆಯುತ್ತದೆ. ಪ್ರತಿ ಶನಿವಾರ ಭಜನೆ ಇತ್ಯಾದಿ ಕಾರ್ಯಕ್ರಮಗಳು ಟ್ರಸ್ಟ್ ವತಿಯಿಂದ ನಡೆದುಕೊಂಡು ಬಂದಿವೆ. ಟ್ರಸ್ಟ್ ಉಚಿತವಾಗಿ ಸಂಗೀತ ಪಾಠ, ಭಜನೆಯನ್ನು ಕಲಿಸುವ ಕಾರ್ಯವನ್ನೂ ದುವರಿಸಿಕೊಂಡು ಬಂದಿದೆ.  

ಮುಖಪುಟ; /ನಮ್ಮದೇವಾಲಯಗಳು