ಮುಖಪುಟ /ನಮ್ಮದೇವಾಲಯಗಳು 

ದೇವನಹಳ್ಳಿ ವಿಜಯಪುರದ ಚನ್ನಕೇಶವ ದೇವಾಲಯ 

ಅರ್ಜುನ ಪ್ರತಿಷ್ಠಾಪಿತ ಸೌಮ್ಯ ಕೇಶವ

*ಟಿ.ಎಂ.ಸತೀಶ್

vijayapura, Devanahalli, Keshava temple, sowmya keshava temple, rana byregowda, ಚನ್ನಕೇಶವ ದೇವಾಲಯ ವಿಜಯಪುರ, temples of Karnataka, karnataka temples, ourtemples.in, ನಮ್ಮ ದೇವಾಲಯಗಳುಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ದೇವನಹಳ್ಳಿಯಿಂದ 10 ಕಿಲೋ ಮೀಟರ್ ದೂರದಲ್ಲಿರುವ ವಿಜಯಪುರ ಹಲವು ದೇವಾಲಯಗಳ ನಾಡು. ಇಲ್ಲಿ ದ್ವಾಪರಯುಗದ ಕಾಲದ್ದೆಂಬ ಪ್ರತೀತಿ ಇರುವ ಶ್ರೀ. ಚನ್ನಕೇಶವನ ದೇವಾಲಯವಿದೆ.

ವಿಜಯಪುರಕ್ಕೆ ಹಿಂದೆ ವೇದಗಾನಪುರ ಎಂಬ ಹೆಸರಿತ್ತಂತೆ. ಇಲ್ಲಿ ವೇದಗಳನ್ನು ಅದರಲ್ಲೂ ಸಾಮವೇದವನ್ನು ಸಂಗೀತಮಯವಾಗಿ ಹಾಡುತ್ತಿದ್ದ ವೇದಶಾಸ್ತ್ರ ಪಾರಂಗತರಿದ್ದ ಕಾರಣ ಈ ಊರಿನಲ್ಲಿ ಸದಾ ವೇದಮಂತ್ರಗಳು ಮೊಳಗುತ್ತಿದ್ದವಂತೆ. ಹೀಗಾಗಿ ಊರಿಗೆ ವೇದಗಾನಪುರ ಎಂಬ ಹೆಸರು ಬಂದಿತ್ತು.  ಬಳಿಕ ವಡಿಗೆಪ್ಪನಾಯಕ ಈ ಊರನ್ನು ಅಭಿವೃದ್ಧಿ ಪಡಿಸಿದ ಮೇಲೆ ಈ ಊರಿಗೆ ವಡಿಗೇನಹಳ್ಳಿ ಎಂಬ ಹೆಸರು ಬಂದಿತ್ತೆಂದೂ ಹೇಳಲಾಗುತ್ತದೆ.

 ಊರಿನ ಹಿರಿಯರೊಬ್ಬರು ಹೇಳುವಂತೆ ಮಾಗಡಿ ಕೆಂಪೇಗೌಡರ ಸೋದರಿ ವಿಡಿಗೆಮ್ಮ ಎಂಬುವವರನ್ನು ಆವತಿಯ ರಣಬೈರೇಗೌಡ ಎಂಬ ಪಾಳೆಯಗಾರನಿಗೆ ಕೊಟ್ಟು ಮದುವೆ ಮಾಡದ್ದರಂತೆ. ಆಕೆಗೆ ಕೆಂಪೇಗೌಡರ ಇಲ್ಲಿ ಜಾಗ ನೀಡಿದ್ದರಂತೆ. ಹೀಗಾಗಿ ಕೆಂಪೇಗೌಡರ ಸೋದರಿ ಇಲ್ಲಿ ಊರು ನಿರ್ಮಿಸಿದರಂತೆ. ಈ ವಾದವನ್ನು ಹಲವರು ಒಪ್ಪುವುದಿಲ್ಲ. ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ತರುವಾಯ ವಿಜಯದ ಸಂಕೇತವಾಗಿ 1948ರಲ್ಲಿ ಈ ಊರಿಗೆ ವಿಜಯಪುರ ಎಂದು ಹೆಸರಿಟ್ಟರೆಂದು ಇತಿಹಾಸ ಹೇಳುತ್ತದೆ.

vijayapura, Devanahalli, Keshava temple, sowmya keshava temple, rana byregowda, ಚನ್ನಕೇಶವ ದೇವಾಲಯ ವಿಜಯಪುರ, temples of Karnataka, karnataka temples, ourtemples.in, ನಮ್ಮ ದೇವಾಲಯಗಳುಈ ದೇವಾಲಯದಲ್ಲಿರುವ ಶ್ರೀ. ಚನ್ನ ಕೇಶವನ ಮೂರ್ತಿಯನ್ನು ಸ್ವಯಂ ಮಧ್ಯಮ ಪಾಂಡವ ಅರ್ಜುನನೇ ಪ್ರತಿಷ್ಠಾಪನೆ ಮಾಡಿ ಪೂಜಿಸಿದನೆಂದು ಹೇಳಲಾಗುತ್ತದೆ. ಅರ್ಜುನ ಒಮ್ಮೆ ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳ ಯಾತ್ರೆಗೆಂದು ಬಂದ ಸಂದರ್ಭದಲ್ಲಿ,ಪೂರ್ವದಲ್ಲಿ ಮಹಾದಂಡಕಾರಣ್ಯದ ಭಾಗವಾದ ಕುಂದಾರಣ್ಯವೆಂದು ಕರೆಸಿಕೊಂಡಿದ್ದ ಈಗಿನ ವಿಜಯಪುರ ಪ್ರದೇಶಕ್ಕೆ ಬಂದನಂತೆ, ಆಗ ರಾತ್ರಿಯಾಗಿತ್ತು. ಅರ್ಜುನನಿಗೆ ಹಸಿವು ಹೆಚ್ಚಾಗಿತ್ತಂತೆ. ಆಗ ಅರ್ಜುನ, ಕೃಷ್ಣ ಪರಮಾತ್ಮ ನೀನಿಲ್ಲದೆ ನಾನು ಹೇಗೆ ಊಟ ಮಾಡಲಿ, ನೀನೂ ನನ್ನ ಜೊತೆ ಇದ್ದರೆ ನಿನಗೆ ನೈವೇದ್ಯ ಮಾಡಿ ನಾನೂ ಊಟ ಮಾಡಬಹುದಾಗಿತ್ತು ಎಂದು ಅಲವತ್ತುಕೊಂಡನಂತೆ. ಆಗ ಕೃಷ್ಣನು ತನ್ನ ರೂಪವನ್ನು ಕಲ್ಲಿನ ಪ್ರತಿಮೆಯಲ್ಲಿ ಮಾಡಿ ಕಲ್ಲಿಗೆ ನೈವೇದ್ಯ ಮಾಡಿದರೆ ತನಗೆ ಸಲ್ಲುತ್ತದೆ, ಬಳಿಕ ಊಟ ಮಾಡು ಎಂದು ಹೇಳಿದಂತೆ ಆಯಿತಂತೆ. ಕೃಷ್ಣನ ಆಣತಿಯಂತೆ ಅರ್ಜುನ ಇಲ್ಲಿ ಚನ್ನ ಕೇಶವನ ಶಿಲಾಮೂರ್ತಿಯ ಪ್ರತಿಷ್ಠಾಪನೆ ಮಾಡಿ ಊಟ ಮಾಡಿದ ಎಂದು ಹೇಳಲಾಗುತ್ತದೆ. ಇಲ್ಲಿರುವ ದೇವರನ್ನು ಪುರ ಜನರು ಸೌಮ್ಯಕೇಶವ ಎಂದೂ ಕರೆಯುತ್ತಾರೆ.

ಕೆಂಪೇಗೌಡರ ಸೋದರಿ ಇಲ್ಲಿಗೆ  ಬಂದಾಗ, ಅವರ ಸ್ವಪ್ನದಲ್ಲಿ ಕಾಣಿಸಿಕೊಂಡ ಕೇಶವ ತಾನು ದ್ವಾಪರದಲ್ಲಿ ಅರ್ಜುನನಿಂದ ಪ್ರತಿಷ್ಠಾಪಿತನಾಗಿ ಈಗ ಹುತ್ತದಲ್ಲಿರುವುದಾಗಿ, ತನಗೆ ಗುಡಿ ಕಟ್ಟಿಸು ಎಂದು ತಿಳಿಸಿ ಅದೃಶ್ಯನಾದನಂತೆ.

vijayapura, Devanahalli, Keshava temple, sowmya keshava temple, rana byregowda, ಚನ್ನಕೇಶವ ದೇವಾಲಯ ವಿಜಯಪುರ, temples of Karnataka, karnataka temples, ourtemples.in, ನಮ್ಮ ದೇವಾಲಯಗಳುಸ್ವಪ್ನ ವಿಚಾರವನ್ನು ಎಲ್ಲರಿಗೂ ತಿಳಿಸಿದ ಆಕೆ, ಕನಸಲ್ಲಿ ಕಂಡ ಜಾಗದಲ್ಲಿ ಹುತ್ತ ಅಗೆದು ನೋಡಿದಾಗ ಅಲ್ಲಿ ಗರ್ಭಗೃಹ ಮತ್ತು ಸುಂದರಕೇಶವ ವಿಗ್ರಹ ಕಂಡಿತಂತೆ. ಆಕೆ ಈ ದೇವಾಲಯ ಜೀರ್ಣೋದ್ಧಾರ ಮಾಡಿದ್ದಾರೆ ಎನ್ನಲಾಗುತ್ತದೆ. ದೇವಾಲಯದಲ್ಲಿರುವ ಶಾಸನದಲ್ಲಿ ಕೂಡ ಇಲ್ಲಿ ಹಿಂದೆಯೇ ಪುರಾತನ ದೇವಾಲಯವಿತ್ತು. ತಾನು ಅದನ್ನು ಜೀರ್ಣೋದ್ಧಾರ ಮಾಡಿರುವುದಾಗಿ ಆಕೆ ಕೆತ್ತಿಸಿದ್ದಾರಂತೆ. ಅಲ್ಲದೆ ಇದು ಅರ್ಜುನ ಪ್ರತಿಷ್ಠಾಪಿತ ಕೇಶವ ಎಂಬ ಪುರಾತನ ಶಾಸನ ಇತ್ತೆಂಬ ಉಲ್ಲೇಖವನ್ನೂ ಈಗಿರುವ ಶಾಸನದಲ್ಲಿ ಮಾಡಿದ್ದಾರೆ ಎಂದು ಅರ್ಚಕರು ತಿಳಿಸುತ್ತಾರೆ.

ಎಲ್ಲ ನಾರಾಯಣ ದೇವಾಲಯಗಳಲ್ಲಿ ದೇವರ ಎಡಗೈನಲ್ಲಿ ಶಂಖ, ಬಲಗೈನಲ್ಲಿ ಚಕ್ರ ಇರತ್ತೆ. ಆದರೆ ಇಲ್ಲಿ ಬಲಗೈನಲ್ಲಿ ಶಂಖ ಎಡಗೈನಲ್ಲಿ ಚಕ್ರವಿರುವುದು ವಿಶೇಷ. ಅಲ್ಲದೆ ಮರಕತಶಿಲೆಯಲ್ಲಿ ಇಲ್ಲಿ ದೇವತಾಮೂರ್ತಿ ಕೆತ್ತಲಾಗಿದ್ದು, ಕ್ಷೀರಾಭಿಷೇಕ ಮಾಡುವಾಗ ಶಿರದ ಮೇಲೆ ಹಾಲು ಹಾಕಿದರೆ ಅದು ನೀಲಿಯ ಬಣ್ಣಕ್ಕೆ ತಿರುಗುತ್ತದೆ.

ದೇವಾಲಯಕ್ಕೆ ಭವ್ಯವಾದ ದ್ವಾರಬಂಧ ಮತ್ತು ಗೋಪುರವಿದೆ. 1996ರ ಆಗಸ್ಟ್ 9ರಂದು ದೇವಾಲಯದ ರಾಜಗೋಪುರ ಪ್ರಾರಂಭೋತ್ಸವ ಹಾಗೂ ಕುಂಭಾಭಿಷೇಕ ನೆರವೇರಿದ್ದು, ಮೂರು ಅಂತಸ್ತುಗಳ ಗೋಪುರದ vijayapura, Devanahalli, Keshava temple, sowmya keshava temple, rana byregowda, ಚನ್ನಕೇಶವ ದೇವಾಲಯ ವಿಜಯಪುರ, temples of Karnataka, karnataka temples, ourtemples.in, ನಮ್ಮ ದೇವಾಲಯಗಳುಮೇಲೆ ಪಂಚ ಕಳಶ ಸ್ಥಾಪನೆ ಮಾಡಲಾಗಿದೆ. ಪ್ರತಿ ಹಂತದಲ್ಲೂ ದ್ವಾರಪಾಲಕರ ಮತ್ತು ಶಂಖ, ಚಕ್ರ, ತ್ರಿಪುಂಡರ, ಪರಿವಾರ ದೇವತೆಗಳ ಹಾಗೂ ನಾರಾಯಣನ ವಿವಿಧ ರೂಪದ ಗಾರೆಯ ಶಿಲ್ಪಗಳಿವೆ. 

ಪ್ರಧಾನ ದ್ವಾರದಿಂದ ಒಳ ಹೋದರೆ ಗರುಡಗಂಬ, ದ್ವಜಸ್ತಂಭ ಮಂಟಪಗಳು ಕಾಣುತ್ತವೆ. ದೇವಾಲಯಕ್ಕೆ ಕಲ್ಲಿನ ಕಂಬಗಳಿಂದ ನಿರ್ಮಿಸಿದ ಮುಖಮಂಟಪವಿದ್ದು, ಇದರ ಮೇಲೆ ಗಾರೆಗಚ್ಚಿನ ಗೋಪುರಗಳನ್ನು ನಿರ್ಮಿಸಲಾಗಿದೆ. ಈ ಗೋಪುರ ಗೂಡುಗಳಲ್ಲಿ ಹಾಗೂ ಮೇಲ್ಭಾಗದಲ್ಲಿ ಗಣಪ, ಶ್ರೀಕೃಷ್ಣ, ತುಂಬುರು ನಾರದರು, ಹನುಮಂತ, ಗರುಡನ ಗಾರೆಯ ಶಿಲ್ಪಗಳಿವೆ. ಐದು ಗೋಪುರ ಗೂಡುಗಳ ಮೇಲೆ ಕಶಳಗಳೂ ಇವೆ. ದೇವಾಲಯದಲ್ಲಿ ಲಕ್ಷ್ಮೀ ಗುಡಿ, ರಾಯರ ಬೃಂದಾವನ ಹಾಗೂ ನವಗ್ರಹ ಮಂಟಪವೂ ಇದೆ. 

ಮುಖಪುಟ /ನಮ್ಮದೇವಾಲಯಗಳು