ಮುಖಪುಟ /ನಮ್ಮದೇವಾಲಯಗಳು   

ಬೆಂಗಳೂರು ವಿವಿಯ ವಿದ್ಯಾಗಣಪತಿ

*ಟಿ.ಎಂ.ಸತೀಶ್

V.v.Ganapati, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಹಚ್ಚಹಸುರಿನ ಸಸ್ಯ ಶಾಮಲೆಯ ನಡುವೆ, ಬೆಂಗಳೂರು ಹೊರವಲಯದ ಪ್ರಶಾಂತ ಪರಿಸರದಲ್ಲಿ ವಿಶ್ವವಿದ್ಯಾಲಯವಿರಬೇಕೆಂದು 1970 ದಶಕದಲ್ಲಿ ಮೈಸೂರು ರಸ್ತೆಯಲ್ಲಿ ಬೆಂಗಳೂರು ವಿ.ವಿ.ಯ ಜ್ಞಾನಭಾರತಿ ತಲೆ ಎತ್ತಿತು.

ಮಲ್ಲತ್ತಹಳ್ಳಿ ಬಳಿ ಸಿಬ್ಬಂದಿಯ ಅನುಕೂಲತೆಗಾಗಿ ವಸತಿ ಗೃಹ ನಿರ್ಮಾಣವೂ ಆಯಿತು. ಆ ಪ್ರದೇಶದಲ್ಲಿ ಹಳೆಯ ಗ್ರಾಮವೂ ಇತ್ತು. ಗ್ರಾಮಕ್ಕೊಂದು ದೇವಾಲಯ ಬೇಕೆಂದು ೧೯೮೭ರಲ್ಲಿ ಊರಿನ ಜನತೆ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಸೇರಿ ಪುಟ್ಟದೊಂದು ಗಣೇಶನ ದೇವಾಲಯ ನಿರ್ಮಿಸಿದರು.

ನಿತ್ಯ ಪೂಜೆ ಇಲ್ಲಿ ನಡೆಯುತ್ತಿತ್ತು. ಆದರೆ, 2002ರಲ್ಲಿ ಈ ಪ್ರದೇಶದಲ್ಲಿ ಹೊರ ವರ್ತುಲ ರಸ್ತೆ ನಿರ್ಮಿಸುವ ಕಾರ್ಯ ಆರಂಭವಾದಾಗ, ದೇವಾಲಯ ಸ್ಥಳಾಂತರ ಅನಿವಾರ್ಯವಾಯ್ತು. ಬಿಡಿಎ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಾರ್ವಜನಿಕರು ಸೇರಿ 2003ರಲ್ಲಿ ಬೃಹತ್ ಭವ್ಯ ದೇವಾಲಯ ನಿರ್ಮಿಸಿದರು.

ವಿದ್ಯಾದಾನ ನಡೆಯುವ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ ಈ ದೇವಾಲಯದಲ್ಲಿ ವಿದ್ಯಾಗಣಪತಿಯ ಪುನರ್ ಪ್ರತಿಷ್ಠಾಪನೆ ಜರುಗಿತು.

ಭವ್ಯವಾಗಿರುವ ದೇವಾಲಯ ವಿಶಾಲವಾದ ಪ್ರದೇಶದಲ್ಲಿದ್ದು, ದೇಗುಲದ ಎದುರು ಅಶ್ವತ್ಥಕಟ್ಟೆ ಇದೆ. ವೃಕ್ಷದ ಕೆಳಗೆ ನಾಗರಕಲ್ಲುಗಳನ್ನು ಸ್ಥಾಪಿಸಲಾಗಿದೆ. ಕಟ್ಟೆಯ ಬಲ ಭಾಗದಲ್ಲಿ ನವಗ್ರಹಗಳ ಗುಡಿ ಇದೆ. ಪ್ರಧಾನ ದೇವಾಲಯ ಇತ್ತೀಚಿನ ಇಟ್ಟಿಗೆ, ಸಿಮೆಂಟ್ ಕಟ್ಟಡವಾಗಿದ್ದು, ಆವರಣ ಗೋಡೆಗೆ ಗ್ರಿಲ್ ಅಳವಡಿಸಿ ಗಾಳಿ, ಬೆಳಕಿಗೆ ಅವಕಾಶ ಮಾಡಲಾಗಿದೆ.

our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಮಧ್ಯದಲ್ಲಿರುವ ಗರ್ಭಗೃಹದ ಭಿತ್ತಿಗಳಲ್ಲಿ ಸಿಮೆಂಟ್‌ನಿಂದಲೇ ಕಂಬಗಳನ್ನು ನಿರ್ಮಿಸಲಾಗಿದೆ. ಎತ್ತರದಲ್ಲಿರುವ ಗರ್ಭಗೃಹ ಪ್ರವೇಶಕ್ಕೆ ಐದು ಮೆಟ್ಟಿಲುಗಳಿವೆ. ದೇವರ ಎದುರು ಮತ್ತೊಂದು ಎತ್ತರದ ಪೀಠದಲ್ಲಿ ಗಣಪನ ವಾಹನ ಮೂಷಿಕವಿದೆ. ದೇವಾಲಯದ ಪ್ರವೇಶ ದ್ವಾರದ ಬಳಿ ಆನೆ ಹಾಗೂ ಎಡ ಬಲಗಳಲ್ಲಿ  ದ್ವಾರಪಾಲಕರ ಪ್ರತಿಮೆಗಳಿವೆ. ಗರ್ಭಗೃಹದ ಸುತ್ತ ಇರುವ ಭಿತ್ತಿಯ ಗೂಡುಗಳಲ್ಲಿ ನಾನಾ ರೂಪದ ಗಣಪನ ಸಿಮೆಂಟ್ ಪ್ರತಿಮೆಗಳಿಗೆ. ಇಲ್ಲಿನ ಛಾವಣಿಯಲ್ಲಿ ಮೇಷ ವೃಷಭಾದಿ ನವಗ್ರಹಗಳ ವರ್ಣಚಿತ್ರವಿದೆ.

ಶೃಂಗೇರಿಯ ರಾಜೇಂದ್ರಭಟ್ ಹಾಗೂ ಸುಧಾಕರ ಭಟ್ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತದೆ.  ಪ್ರತಿ ತಿಂಗಳ ಪೌರ್ಣಿಮೆಯ ದಿನ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಚೌತಿಯ ದಿನ ಸಂಕಷ್ಟ ಹರ ಗಣಪತಿ ಪೂಜೆ ನಡೆಯುತ್ತದೆ.

ಮುಖಪುಟ /ನಮ್ಮದೇವಾಲಯಗಳು