ಮುಖಪುಟ /ನಮ್ಮದೇವಾಲಯಗಳು   

ಯಲಹಂಕದ ಪೇಟೆ ಆಂಜನೇಯಸ್ವಾಮಿ ದೇವಾಲಯ

Yalahanka pete Anjaneya temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರು ಉತ್ತರ ಜಿಲ್ಲೆಯಲ್ಲಿರುವ ಯಲಹಂಕ ಐತಿಹಾಸಿಕ ಸ್ಥಳ. ಬೆಂಗಳೂರಿನಿಂದ 16 ಕಿಮೀ ದೂರದಲ್ಲಿರುವ ಈ ಪ್ರದೇಶ ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಟ್ಟಿದೆ.

ಚೋಳರ ಕಾಲದಲ್ಲಿ ಇಲೈಪಾಕ್ಕಂ ಎಂದೂ ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಕರೆಸಿಕೊಂಡಿದ್ದ ಈ ಪ್ರದೇಶ 1871ರವರೆಗೆ ತಾಲ್ಲೂಕು ಕೇಂದ್ರವಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಬೆಂಗಳೂರಿನ ಸ್ಥಾಪಕ ಕೆಂಪೇಗೌಡರ ಮೂಲ ಪುರುಷ ಜಯದೇವಗೌಡ ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ತನ್ನ ವಶಪಡಿಸಿಕೊಂಡು ಕೋಟೆ ಕೊತ್ತಳಗಳನ್ನು ಕಟ್ಟಿಸಿ, 1420ರಲ್ಲಿ ವಿಜಯನಗರದರಸರಿಂದ ಯಲಹಂಕನಾಡ ಪ್ರಭು ಎಂಬ ಬಿರುದನ್ನು ಪಡೆದು, ಈ ಪ್ರಾಂತ್ಯವನ್ನಾಳಿದ. ಇವನ ವಂಶಸ್ಥರು ಸುಮಾರು 2೦೦ ವರ್ಷಗಳ ಕಾಲ ಯಲಹಂಕನಾಡನ್ನು ಆಳಿದ್ದಾರೆ.

Yalahanka pete Anjaneya temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಈ ಪ್ರದೇಶದಲ್ಲಿ ಹಲವು ಪುರಾತನ ದೇವಾಲಯಗಳಿವೆ. ವೇಣುಗೋಪಾಲ ಸ್ವಾಮಿ ದೇವಾಲಯ, ವಿಶ್ವನಾಥೇಶ್ವರ ದೇವಾಲಯ, ವೀರಣ್ಣ ಸ್ವಾಮಿ ದೇವಾಲಯ, ಪೇಟೆ ಆಂಜನೇಯಸ್ವಾಮಿ ದೇವಾಲಯ, ಗಂಗಮ್ಮ ದೇವಾಲಯಗಳಿವೆ.

ಪೇಟೆ ಆಂಜನೇಯಸ್ವಾಮಿ ದೇವಾಲಯ ಸಾಧಾರಣ ಇಟ್ಟಿಗೆ ಹಾಗೂ ಕಲ್ಲು ಕಟ್ಟಡವಾಗಿದ್ದು, ಸಣ್ಣ ಗುಡಿ. ದೇವಾಲಯದ ಮೇಲೆ ಪುಟ್ಟ ಗೂಡಿದ್ದು ಅದರಲ್ಲಿ ಹನುಮದ್ ಸಮೇತ ರಾಮಚಂದ್ರ ದೇವರ ಗಾರೆ ವಿಗ್ರಹವಿದೆ.

ದೇವಾಲಯದಲ್ಲಿ ಪುಟ್ಟ ಗೂಡಿನಂಥ ಗರ್ಭಗೃಹವಿದ್ದು, ಇದರಲ್ಲಿ ಆಂಜನೇಯನ ಮೂರ್ತಿ ಕೆತ್ತಿರುವ ಶಿಲೆಯಿದೆ.

ಸ್ಥಳೀಯರ ಪ್ರಕಾರ ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಊರಿಗೆ ಪೀಡೆ, ಪಿಶಾಚಿಗಳ ಕಾಟ Yalahanka pete Anjaneya temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬಾರದಂತೆ ಊರಮುಂದೆ ಆಂಜನೇಯನ ದೇವಾಲಯ ಕಟ್ಟಲಾಗಿದೆ. ಹಿಂದಿನಿಂದಲೂ ಇದು ಪೇಟೆ ಪ್ರದೇಶವಾದ ಕಾರಣ, ಇಲ್ಲಿರುವ ಆಂಜನೇಯ ಪೇಟೆ ಆಂಜನೇಯ ಎಂದು ಕರೆಸಿಕೊಂಡಿದ್ದಾರೆ. ದೇವಾಲಯದ ಪ್ರಾಕಾರದಲ್ಲಿ ನಾಗರಕಲ್ಲುಗಳಿವೆ. ಹನುಮಜಯಂತಿ, ರಾಮನವಮಿಗಳಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.  ಈ ದೇವಾಲಯದ ಎದುರು ಇರುವ ಮತ್ತೊಂದು ಪುಟ್ಟ ಪುರಾತನ ಗುಡಿಯಲ್ಲಿ ವೀರಣ್ಣ ಸ್ವಾಮಿ ನೆಲೆಸಿದ್ದಾನೆ.

ಮಾರ್ಗ: ಯಲಹಂಕದಿಂದ ದೇವನಹಳ್ಳಿಗೆ ಹೋಗುವ ರಸ್ತೆಯಲ್ಲಿ ಬಂದಾಗ ಕಾಂಪ್ಲೆಕ್ಸ್ ಎದುರು ಕಾಣುವ ಬೃಹದಾಕಾರದ ಆಂಜನೇಯನ ಪ್ರತಿಮೆಯ ಬಳಿ ಎಡಕ್ಕೆ ತಿರುಗಿದರೆ, ಹಳೆಯ ಊರು ಸಿಗುತ್ತದೆ. ಬಸ್ ನಿಲ್ದಾಣದ ಪಕ್ಕದಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ದೂರ ಕ್ರಮಿಸಿದರೆ, ಆಂಜನೇಯನ ದೇವಾಲಯ ಸಿಗುತ್ತದೆ.

ಮುಖಪುಟ /ನಮ್ಮದೇವಾಲಯಗಳು