ಮುಖಪುಟ /ನಮ್ಮದೇವಾಲಯಗಳು   

ಯಲಹಂಕದ ವೇಣುಗೋಪಾಲಸ್ವಾಮಿ ದೇವಾಲಯ

Yalahanka Venugopala swamy temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಿಗುವ ಹಳೆಯ ನಗರ ಯಲಹಂಕ. ಬೆಂಗಳೂರಿನಿಂದ 16 ಕಿಮೀ ದೂರದಲ್ಲಿರುವ ಈ ನಾಡು ಚೋಳರ ಕಾಲದಲ್ಲಿ ಇಲೈಪಾಕ್ಕಂ ಎಂದೂ ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಕರೆಸಿಕೊಂಡಿತ್ತು ಎನ್ನುತ್ತದೆ ಇತಿಹಾಸ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕಾಲದಲ್ಲಿ ಈ ಪ್ರದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆಗಳಿವೆ.

ಇಲ್ಲಿ ಸುಮಾರು 800ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯವಿದೆ. ಐತಿಹ್ಯದ ರೀತ್ಯ ಮಹಾಭಾರತದಲ್ಲಿ ಉಲ್ಲೇಖಿಸಲಾಗಿರುವ ಜನಮೇಜಯನಿಗೆ ಒಮ್ಮೆ ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀಕೃಷ್ಣ ಪರಮಾತ್ಮ ತನ್ನ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸಿದನಂತೆ. ಅದರಂತೆ ಜನಮೇಜಯ ವೇಣುಗೋಪಾಲಸ್ವಾಮಿ ಪ್ರತಿಷ್ಠಾಪನೆಗೆ ಮುಂದಾದ. ಈ ದೇವಾಲಯದಲ್ಲಿರುವ ಮೂಲ ದೇವರನ್ನು ಸಪ್ತಋಷಿಗಳು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.

Yalahanka Venugopala swamy temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಕಲಿಯುಗದಲ್ಲಿ ಈ ಪ್ರಾಂತ್ಯವನ್ನು ಚೋಳರು ಆಳುತ್ತಿದ್ದ ಸಂದರ್ಭದಲ್ಲಿ ಇಲ್ಲಿ ದೇವಾಲಯ ಕಟ್ಟಿಸಿದರಂತೆ. ಮುಂದಿನ ಪ್ರಾಕಾರವನ್ನು ಯಲಹಂಕನಾಡಪ್ರಭುಗಳು ಕಟ್ಟಿಸಿ, ದೇವಾಲಯದ ಜೀರ್ಣೋದ್ಧಾರ ಮಾಡಿದರು ಎಂದು ತಿಳಿದುಬರುತ್ತದೆ. ದೇವಾಲಯದ ಒಳ ಪ್ರಾಕರದಲ್ಲಿ ಹಾಗೂ ದೇವಾಲಯದ ಹೊರಗೆ ರಸ್ತೆಯಂಚಿನಲ್ಲಿ ಎರಡು ಗರುಡಗಂಭಗಳಿದ್ದು ಇವುಗಳಲ್ಲಿ ಶಾಸನಗಳೂ ಇವೆ. ಒಳ ಪ್ರಾಕಾರದ ಗರುಡಗಂಭದ ಕೆಳಗೆ ದೇವರಿಗೆ ಅಭಿಮುಖವಾಗಿ ಕೈಮುಗಿದು ನಿಂತಿರುವ ಗರುಡನ ವಿಗ್ರಹವಿದೆ.

ದೇವಾಲಯಕ್ಕೆ ನಾಲ್ಕು ಅಂತಸ್ತಿನ ಎತ್ತರ ಹಾಗೂ ಭವ್ಯವಾದ ರಾಜಗೋಪುರವಿದೆ. ಗೋಪುರದಲ್ಲಿ ದೇವಾನುದೇವತೆಗಳ ಗಾರೆ ಶಿಲ್ಪಗಳಿವೆ. ಒಳಗೆ ಪ್ರವೇಶಿಸುತ್ತಿದ್ದಂತೆ ಇರುವ ಮಂಟಪದ ಮೇಲೆ ನಿರ್ಮಿಸಲಾಗಿರುವ ಗೋಪರಗಳಲ್ಲಿರುವ ಗೂಡುಗಳಲ್ಲಿನ ದಶಾವತಾರ, ಸತ್ಯಭಾಮಾ ಗರ್ಭಭಂಗ ಇತ್ಯಾದಿ ಗಾರೆಯ ಶಿಲ್ಪಗಳು ಮನಸೆಳೆಯುತ್ತವೆ.

ಮುಖಮಂಟಪ ದಾಟಿದರೆ ಸುಖನಾಸಿ, ಭುವನೇಶ್ವರಿ, ಅಂತರಾಳ ಹಾಗೂ ಗರ್ಭಗೃಹವಿದೆ. ಭುವನೇಶ್ವರಿಯಲ್ಲಿ ಸಾಧಾರಣ Yalahanka Venugopala swamy temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಶಿಲ್ಪಗಳಿವೆ. ಇದಕ್ಕೆ ಆಧಾರವಾಗಿರುವ ಕಂಬಗಳಲ್ಲಿ ಹನುಮಂತ, ಗಣೇಶ, ಶ್ರೀರಾಮ, ವಾಲಿಸುಗ್ರೀವ ಮೊದಲದ ಉಬ್ಬುಶಿಲ್ಪಗಳಿವೆ. ಒಂದು ಕಂಬದಲ್ಲಿ ಉಗ್ರನರಸಿಂಹನ ವಿಗ್ರಹವಿದ್ದು ಇದಕ್ಕೆ ನಿತ್ಯಪೂಜೆಯೂ ನಡೆಯುತ್ತದೆ. ಗರ್ಭಗೃಹದ ಅಕ್ಕ ಪಕ್ಕದಲ್ಲಿ ಬೃಹದಾಕಾರದ ಜಯವಿಜಯರ ವಿಗ್ರಹಗಳಿವೆ.

ಗರ್ಭಗೃಹದಲ್ಲಿ ರುಕ್ಮಿಣಿ, ಸತ್ಯಭಾಮಾ ಸಹಿತ ವೇಣುಗೋಪಾಲಸ್ವಾಮಿಯ ಸುಂದರ ವಿಗ್ರಹವಿದೆ. ಕೈಯಲ್ಲಿ ಕೊಳಲು ಹಿಡಿದು ನಿಂತಿರುವ ಪ್ರತಿಮೆ ಸುಂದರವಾಗಿದೆ.  ಪಕ್ಕದ ಗರ್ಭಗೃಹದಲ್ಲಿ ಶ್ರೀಲಕ್ಷ್ಮೀಯ ಸುಂದರ ಕೃಷ್ಣಶಿಲೆಯ ವಿಗ್ರಹವಿದೆ. ದೇವಾಲಯ ಪ್ರಾಕಾರದಲ್ಲಿ ವಿಶ್ವಸೇನ, ರಾಮಾನುಜಾಚಾರ್ಯರು, ನಮ್ಮಾಳ್ವಾರ್ ಹಾಗೂ ದೇಶಿಕಾಚಾರ್ ಪ್ರತಿಮೆಗಳೂ ಇವೆ.

ದೇವಾಲಯವನ್ನು 1991ರಲ್ಲಿ ನವೀಕರಿಸಲಾಗಿದೆ. ಈ ದೇವಾಲಯದಲ್ಲಿ ನಿತ್ಯವೂ ಪಾಂಚರಾತ್ರಾಗಮ ರೀತ್ಯ ಪಂಚಾಮೃತ ಅಭಿಷೇಕ, ಪೂಜೆಗಳು ಜರುಗುತ್ತವೆ. ಪ್ರತಿ ಮಂಗಳವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನರಸಿಂಹಜಯಂತಿ, ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ತಿಂಗಳು ಹುಣ್ಣಿಮೆಯ ಸಂಜೆ ಪ್ರಾಕಾರ ರಥೋತ್ಸವ ಜರುಗುತ್ತದೆ.

Yalahanka Venugopala swamy temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಚೈತ್ರಶುದ್ಧ ಪೌರ್ಣಿಮೆಯಂದು ರಥೋತ್ಸವ ನಡೆಯುತ್ತದೆ. ರಥೋತ್ಸವದ ಅಂಗವಾಗಿ 1 ತಿಂಗಳುಗಳ ಕಾಲ ಹಾಗೂ ವೈಕುಂಠ ಏಕಾದಶಿ ಹಾಗೂ ದ್ವಾದಶಿಯಂದು ವಿಶೇಷ ಧಾರ್ಮಿಕವಿಧಿಗಳು ನಡೆಯುತ್ತವೆ. ರಥಸಪ್ತಮಿಯ ದಿನ ಸೂರ್ಯ ಮಂಡಲೋತ್ಸವ ನಡೆದರೆ, ದಸರೆಯ ಹತ್ತೂ ದಿನಗಳ ಕಾಲ ದೇವರಿಗೆ ವಿಶೇಷ ಅಲಂಕಾರ, ಸೂರ್ಯಮಂಡಲ, ಚಂದ್ರಮಂಡಲ, ಸಿಂಹವಾಹನ, ಹನುಮವಾಹನ, ಶೇಷವಾಹನ, ಗರುಡವಾಹನ, ಗಜವಾಹನ, ಅಶ್ವವಾಹನ, ಮಯೂರ ವಾಹನ, ಕಾಮಧೇನುವಾಹನ, ವೈರಮುಡಿ, ಕಲ್ಪವೃಕ್ಷ, ಬೃಂದಾವನ, ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ. ವಿಜಯದಶಮಿ ದಿನ ಭೂಮಿ ಪೂಜೆ, ಬನ್ನಿಪೂಜೆ, ಜಂಬೂಸವಾರಿಯೂ ಇಲ್ಲಿ ನಡೆಯುತ್ತವೆ.

ವೇಣುಗೋಪಾಲನಿಗೆ ಸಂತಾನ ವೇಣುಗೋಪಾಲನೆಂಬ ಬಿರುದೂ ಇದೆ. ಇದಕ್ಕೆ ಕಾರಣ ಮದುವೆಯಾಗಿ ಬಹುಕಾಲ ಮಕ್ಕಳಾಗದವರು ಭಕ್ತಿಯಿಂದ ಇಲ್ಲಿಗೆ ಆಗಮಿಸಿ ಹರಕೆ ಹೊತ್ತರೆ ಸಂತಾನಭಾಗ್ಯ ದೊರಕುತ್ತದೆ ಎಂಬುದು ನಂಬಿಕೆ.

Yalahanka Venugopala swamy temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಈ ಗೋಪುರದ ಎಡ ಹಾಗೂ ಬಲ ಭಿತ್ತಿಗಳಲ್ಲಿ ಸೊಂಡಿಲು ಮುದುರಿಕೊಂಡ ಹಾಗೂ ಕೈಕಾಲುಗಳು ಸೊಟ್ಟಗಾಗಿರುವ ಮಾನವನ ಹಾಗೂ ವಿರುದ್ಧ ದಿಕ್ಕಿಗೆ ತಿರುಗಿದ ಆನೆಗಳ ಉಬ್ಬುಶಿಲ್ಪವಿದೆ.

ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ನಿರ್ವಹಣೆಗೆ ದೇವಾಲಯ ಸಮಿತಿಯೂ ಇದೆ.   ಹೆಚ್ಚಿನ ವಿವರಗಳಿಗೆ ದೇವಾಲಯದ ಅರ್ಚಕರಾದ ವೈ.ಕೆ.ಜನಾರ್ದನ ಅವರನ್ನು ದೂರವಾಣಿ 9844105608 ಮೂಲಕ ಸಂಪರ್ಕಿಸಬಹುದು. ದೇವಾಲಯದ ಪಕ್ಕದಲ್ಲಿ ವಿಶ್ವನಾಥೇಶ್ವರನ ದೇವಾಲಯವಿದೆ.

ಮುಖಪುಟ /ನಮ್ಮದೇವಾಲಯಗಳು