ಮುಖಪುಟ /ನಮ್ಮದೇವಾಲಯಗಳು   

ಯಲಹಂಕದ ವಿಶ್ವನಾಥೇಶ್ವರ ದೇವಾಲಯ

Yalahanka vishwanateswara temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಈಗ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಗೆ ಸೇರಿರುವ ಬೆಂಗಳೂರು ಹೊರವಲಯ ಯಲಹಂಕ, ಐತಿಹಾಸಿಕವಾಗಿ ಮಹತ್ವದ ಸ್ಥಳ. ಬೆಂಗಳೂರು ನಿರ್ಮಾತೃ ಯಲಹಂಕಭೂಪಾಲ ಕೆಂಪೇಗೌಡರು ವಂಶಜರು ಆಳಿದ ಈ ಪ್ರದೇಶ ಒಂದು ಕಾಲದಲ್ಲಿ ಚೋಳರ, ವಿಜಯನಗರದ ಅರಸರ ಆಳ್ವಿಕೆಗೂ ಒಳಪಟ್ಟಿತ್ತು.

ಇಲ್ಲಿ ಭವ್ಯವಾದ ಹಲವು ಪುರಾತನ ದೇವಾಲಯಗಳಿವೆ. ಇವುಗಳ ಪೈಕಿ, ಶ್ರೀವೇಣುಗೋಪಾಲಸ್ವಾಮಿ ದೇವಾಲಯ ಪ್ರಾಕಾರದಲ್ಲೇ ಇರುವ ಶ್ರೀವಿಶ್ವನಾಥೇಶ್ವರ ದೇವಾಲಯವೂ ಒಂದು. ಮಹಾಭಾರತದ ಜನಮೇಜಯನ ಕಾಲದ್ದೆಂದು ಹೇಳಲಾಗುವ ಈ ದೇವಾಲಯವನ್ನು ಚೋಳರು ನಂತರ ಯಲಹಂಕದ ನಾಡಪ್ರಭುಗಳು ಅಭಿವೃದ್ಧಿ ಪಡಿಸಿದರೆಂದು ಇತಿಹಾಸ ಹೇಳುತ್ತದೆ.

Yalahanka vishwanateswara temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಪಕ್ಕದಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿರುವ ಕಂಬಗಳು ಕಲಾತ್ಮಕವಾಗಿದ್ದರೂ, ವಿಶ್ವನಾಥೇಶ್ವರ ದೇವಾಲಯದ ಕಂಬಗಳು, ಭಿತ್ತಿಗಳು ಸಾಮಾನ್ಯ ಕಲ್ಲುಗಳಿಂದ ನಿರ್ಮಿಸಿದ್ದಾಗಿವೆ. ಇದು  ಜೀರ್ಣೋದ್ಧಾರಗೊಂಡ ದೇವಾಲಯವೆಂಬುದು ತಜ್ಞರ ಅಭಿಮತ. ಕಲ್ಲು ಕಟ್ಟಡದ ಮೇಲೆ ಸುಂದರವಾದ ಗೋಪರ ನಿರ್ಮಿಸಲಿಗಿದ್ದು, ಪ್ರವೇಶದ ಮೇಲಿರುವ ಗೂಡಿನಲ್ಲಿ ಗಣಪತಿ, ಪಾರ್ವತಿ ಸಮೇತನಾದ ಶಿವನ ಹಾಗೂ ನಂದಿಯ ಗಾರೆ ಶಿಲ್ಪಗಳಿವೆ.

ದೇವಾಲಯಕ್ಕೆ ವಿಶಾಲವಾದ ಪ್ರಾಕರವಿದೆ. ಒಳಗೆ ಮೂರು ಗರ್ಭಗೃಹಗಳಿದ್ದು, ಪ್ರಧಾನ ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ವಿಶ್ವನಾಥೇಶ್ವರನ ಬಲ ಭಾಗದಲ್ಲಿ ಗಣಪತಿಯ ಹಾಗೂ ಎಡ ಭಾಗದ ಗರ್ಭಗೃಹದಲ್ಲಿ ಪಾರ್ವತಿ ಅಮ್ಮನವರ ವಿಗ್ರಹವಿದೆ.

ನವರಾತ್ರಿಯ ಕಾಲದಲ್ಲಿ ಹತ್ತೂ ದಿನ  ಗಣೇಶ, ವಿಶ್ವನಾಥೇಶ್ವರ ಹಾಗೂ ಪಾರ್ವತಿ ದೇವಿಯವರಿಗೆ ನಾರಿಕೇಳ ಅಲಂಕಾರ, ಪುಷ್ಪಾಲಂಕಾರ, ಪೂಲಂಗಿ ಸೇವೆ, ಸಕ್ಕರೆ ಅಲಂಕಾರ, ನವಧಾನ್ಯ ಅಲಂಕಾರ, ದ್ರಾಕ್ಷಿ ಗೋಡಂಬಿ ಅಲಂಕಾರ, ಕುಂಕುಮ ಅಲಂಕಾಸ, ಚಿತ್ರವಸ್ತ್ರ ಅಲಂಕಾರ, ವೀಳೆದೆಲೆ Yalahanka vishwanateswara temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಅಲಂಕಾರ, ಗೆಜ್ಜೆವಸ್ತ್ರ ಅಲಂಕಾರ, ಚಂದನ ಅಲಂಕಾರ, ಪಂಚರಂಗಿ ಅಲಂಕಾರ, ಕೊಬ್ಬರಿ ಅಲಂಕಾರ, ಹರಿದ್ರಾ ಅಲಂಕಾರ, ರುದ್ರಾಕ್ಷಿ ಅಲಂಕಾರವೇ ಮೊದಲಾದ ಅಲಂಕಾರಗಳನ್ನು ಮಾಡಲಾಗುತ್ತದೆ.

ಪ್ರತಿ ಸೋಮವಾರ ಏಕಾದಶ ರುದ್ರಾಭಿಷೇಕ ಮತ್ತು ಕಾರ್ತೀಕ ಮಾಸ ಪೂರ್ತಿ ಕುಂಭಾಭಿಷೇಕ, ಮಾಘ ಮಾಸದಲ್ಲಿ ಶತ ರುದ್ರ ಯಾಗವೇ ಮೊದಲಾದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ಪ್ರಾಕಾರದಲ್ಲಿ ಚಂಡಿಕೇಶ್ವರ, ಬೃಂಗಿ, ಸೂರ್ಯನಾರಾಯಣ ಹಾಗೂ ನಾಗರಕಲ್ಲುಗಳಿವೆ. ಇಲ್ಲಿ ಶೈವಾಗಮದ ರೀತ್ಯ ನಿತ್ಯ ಅಭಿಷೇಕ, ಪೂಜೆ ನಡೆಯುತ್ತದೆ. ಆರಿದ್ರಾ ಶಿವಯೋಗದಲ್ಲಿ, ಶಿವರಾತ್ರಿಯಂದು ಹಾಗೂ ತಿಂಗಳ ಎರಡು ಪ್ರದೋಷದ ದಿನ, ಅಮಾವಾಸ್ಯೆ ಹಾಗೂ ಪೌರ್ಣಿಮೆಯಂದು ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ ದಿವಂಗತ ವಿರೂಪಾಕ್ಷ ದೀಕ್ಷಿತರು ಈ ದೇವಾಲಯದಲ್ಲಿ 70ಕ್ಕೂ ಹೆಚ್ಚು ವರ್ಷಗಳ ಕಾಲ ಪೂಜೆ ಸಲ್ಲಿಸಿದ್ದಾರೆ, ಅವರ ಪುತ್ರ ಗುರುರಾಜ ದೀಕ್ಷಿತರು 40ಕ್ಕೂ ಹೆಚ್ಚು ವರ್ಷಗಳ ಕಾಲ ಇದೇ ದೇವಾಲಯದಲ್ಲಿ ಅರ್ಚಕರಾಗಿ Yalahanka vishwanateswara temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಸೇವೆ ಮಾಡಿದ್ದಾರೆ. ಪ್ರಸ್ತುತ ಅದೇ ಕುಟುಂಬದ ಶಿವಶಂಕರ ದೀಕ್ಷಿತರು ವಿಶ್ವನಾಥೇಶ್ವರ ಸ್ವಾಮಿ ಪೂಜೆ ಮಾಡುತ್ತಿದ್ದಾರೆ. ಹೆಚ್ಚಿನ ವಿವರಗಳಿಗೆ ಶಿವಶಂಕರ ದೀಕ್ಷಿತರನ್ನು ದೂರವಾಣಿ 9242458924 ಮೂಲಕ ಸಂಪರ್ಕಿಸಬಹುದು.

ಪಕ್ಕದಲ್ಲಿಯೇ ಶ್ರೀವೇಣುಗೋಪಾಲಸ್ವಾಮಿ ದೇವಾಲಯವಿದೆ. ವಿಶ್ವನಾಥೇಶ್ವರ ದೇವಾಲಯದ ಎದುರು ಗೀತಾಮಂಟಪವಿದೆ. ಪಕ್ಕದಲ್ಲಿ ನವಗ್ರಹಗಳ ಗುಡಿಯಿದೆ. ಅಶ್ವತ್ಥಕಟ್ಟೆಯೂ ಇದೆ.

ಮುಖಪುಟ /ನಮ್ಮದೇವಾಲಯಗಳು